ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ವಾರ್ಡಗಳಿಗೂ ಬೇಸಿಗೆ ಸಂದರ್ಭದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ಸಂಕಲ್ಪ ತೊಟ್ಟು ಅಧ್ಯಕ್ಷರಾದ ಶ್ರೀಮತಿ ರೇವತಿ ಶಂಕರಗೌಡ ಪಾಟೀಲ್ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಮಹೇಶ್ವರಿಯವರು ತಮ್ಮ ಪಂಚಾಯತಿ ವತಿಯಿಂದ ಗ್ರಾಮದ ಹಲವು ಸ್ಥಳಗಳಲ್ಲಿ ಕೊಳವೆ ಭಾವಿಗಳನ್ನು ತೋಡಿಸಿ ಸಾರ್ವಜನಿಕರಿಗೆ ಸ್ಪಂದನೆ ಮಾಡುವುದರ ಜೊತೆಗೆ ಸಿಬ್ಬಂದಿಗಳು ಕೂಡಾ ಗ್ರಾಮದ ಸರ್ವ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಾ ಗ್ರಾಮದ ರಸ್ತೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಟ್ರಾಕ್ಟರ್ ಮೂಲಕ ಪ್ರತಿ ದಿನದ ಕಸವನ್ನು ವಿಲೇವಾರಿ ಮಾಡಿಸುತ್ತಿರುವುದು ಪ್ರಸ್ತುತ ಅಧ್ಯಕ್ಷರು ಎನ್ನುವ ಮಾತುಗಳನ್ನು ಸ್ಥಳೀಯ ವ್ಯಾಪಾರಸ್ಥರು,ಗ್ರಾಮಸ್ಥರು ಹೇಳುತ್ತಿದ್ದಾರೆ ಹಾಗೆ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಇದೇ ರೀತಿ ಚೆನ್ನಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕೆ.ಇ.ಬಿ ಇಂದ ಬಸವೇಶ್ವರ ವೃತ್ತದವರೆಗೂ ರಸ್ತೆಯ ಪಕ್ಕದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆ ಮಾಡಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
ಅಧ್ಯಕ್ಷರ ಮಾತು:
ನನ್ನ ಮೊದಲು ಆದ್ಯತೆ ಗ್ರಾಮದ ಸ್ವಚ್ಛತೆ ಹಾಗೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಮಾಡುವುದು.
ವರದಿ-ಶರಣು ಹುಣಸಗಿ