ಬಾಗಲಕೋಟೆ/ರಬಕವಿ ಬನಹಟ್ಟಿ:ತಾಲೂಕಿನ ರಬಕವಿ ನಗರದ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿಯ ಪಕ್ಕದ ಕಂಠಿ ಬಸವೇಶ್ವರ ಗುಡಿ ಹತ್ತಿರ ಇರುವ ಕುರುಕುರೆ ಬಡಂಗ್ ಇನ್ನು ಹತ್ತು ಹಲವಾರು ಆಹಾರ ಪದಾರ್ಥಗಳನ್ನು ತಯಾರು ಮಾಡುವಂತಹ ಕಾರ್ಖಾನೆ ಸ್ಫೋಟಗೊಂಡು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ.
ಈ ಘಟನೆಯು ಬುಧವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ವಾಣಿಜ್ಯಕ್ಕೆ ಬಳಕೆ ಮಾಡುವಂತ ಸಿಲೆಂಡರ್ ಸ್ಪೋಟಗೊಂಡಿದೆ.ಈ ಕುರಕುರೆ ಬಡಂಗ ಕಾರ್ಖಾನೆಯು ರಬಕವಿ ನಗರದ ಮಹಮ್ಮದ್ ಹುಸೇನ್ ಸಾಬ್ ಗೋಕಾಕ್ ಅವರಿಗೆ ಸೇರಿದ್ದು ಎನ್ನಲಾಗಿದ್ದು ಸ್ಪೋಟಗೊಂಡ ಅಗ್ನಿ ಅವಘಡದಲ್ಲಿ ಸರಿಸುಮಾರು 50 ರಿಂದ 60 ಲಕ್ಷ ರೂಪಾಯಿ ಬೆಲೆ ಬಾಳುವ ಮಸಿನ್ ಗಳು ಒಳಗೊಂಡ ಕಚ್ಚಾ ಮಾಲು ಸಹಿತ ಸಂಪೂರ್ಣ ಹಾನಿಗಿಡಾಗಿವೆ ಎಂದು ಮಾಲೀಕ ಮೊಹಮ್ಮದ್ ಹುಸೇನ್ ಸಾಬ್ ಗೋಕಾಕ್ ಅಳಲು ತೋಡಿಕೊಂಡರು.
ಅದೃಷ್ಟವಶಾತ ಕಾರ್ಖಾನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಕೂಡಲೇ ಬೆಂಕಿಗೆ ಆಹುತಿಯಾಗಿರುವಂತಹ ಕಾರ್ಖಾನೆಯ ಸ್ಥಳಕ್ಕೆ ನಗರದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಲು ಹರಸಹಾಸ ಪಟ್ಟರು ಕೂಡಾ ಯಾವುದೇ ಪ್ರಯೋಜನವಾಗಲಿಲ್ಲ ಸಿಲೆಂಡರ್ ಸ್ಫೋಟಗೊಂಡ ಅಗ್ನಿ ಅವಗಡ ಕುರಿತಂತೆ ಸಮೀಪದ ತೆರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಕಾರ್ಖಾನೆಯ ಸ್ಪೋಟಗೊಂಡ ದುರಂತಕ್ಕೆ ಕಾರಣ ಏನೆಂಬುದರ ಬಗ್ಗೆ ಪೊಲೀಸರ ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ.
ವರದಿ ಮಹಿಬೂಬ್ ಎಂ ಬಾರಿಗಡ್ಡಿ