ರಾಯಚೂರು ಜಿಲ್ಲೆಯ ಸಿಂಧನೂರಿನ ಕರಿಬಸವ ನಗರದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಅವರು ಸಿಂಧನೂರು ಅರಣ್ಯ ಇಲಾಖೆಗೆ ಭೇಟಿ ನೀಡಿ ಈ ಬಾರಿ ಸಾರ್ವಜನಿಕರಿಗೆ ಹಾಗೂ ವನಸಿರಿ ಫೌಂಡೇಶನ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೆ ವಿತರಿಸುವ ಸಸಿಗಳನ್ನು ಬೆಳಸಿರುವುದನ್ನು ನೋಡಿ ತುಂಬಾ ಸಂತೋಷಗೊಂಡು ಇಲಾಖೆಯ ಅಧಿಕಾರಿಗಳಾದ ರುದ್ರಮುನಿ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕರಿಬಸವ ನಗರದ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಸಿಂದನೂರು ಹಸಿರುಮಯವಾಗಿ ಕಂಗೋಳಿಸುತ್ತಿರುವುದಕ್ಕೆ ಅತ್ಯಂತ ಪ್ರಮುಖರು ಎಂದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.ಇಲ್ಲಿನ ಸಸಿಗಳನ್ನು ಬೆಳಸುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ.ಸಿಂಧನೂರಿನಲ್ಲಿ ವನಸಿರಿ ಫೌಂಡೇಶನ್ ಹಾಗೂ ಇನ್ನಿತರ ಹಲವಾರು ಸಂಘಸಂಸ್ಥೆಗಳಿಗೆ ವಿವಿಧ ರೀತಿಯ ಸಸಿಗಳನ್ನು ವಿತರಿಸುವ ಅರಣ್ಯ ಇಲಾಖೆಯ ಕಾರ್ಯ ತುಂಬಾ ಶ್ಲಾಘನೀಯ.ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಸಸಿಗಳನ್ನು ಬೆಳೆಸಿ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ.ಅರಣ್ಯ ಇಲಾಖೆಯ ಮಾರ್ಗದರ್ಶನ ಸಹಕಾರದಿಂದ ಇಂದು ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದ ವನಸಿರಿ ಫೌಂಡೇಶನ್ ತಂಡ ಇಂದು ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು.ಇದರಿಂದ ವನಸಿರಿ ಫೌಂಡೇಶನ್ ರಾಜ್ಯಕ್ಕೆ ಮಾದರಿಯಾಗಿದೆ.ಇಂತಹ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲಿ ಸಾಗಲಿ ಪರಿಸರ ಸುಂದರವಾಗಿ ಬೆಳದರೆ ನಾವುಗಳೆಲ್ಲರೂ ಆರೋಗ್ಯದಿಂದಿರಲು ಸಾದ್ಯ ಪರಿಸರವನ್ನು ಉಳಿಸಿ ಬೆಳಸಲು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ,ವೀರೇಶ ಸಾನಬಾಳ ಉದ್ಯಮಿಗಳು,ಅರಣ್ಯ ಇಲಾಖೆಯ ಅಧಿಕಾರಿ ರುದ್ರಮುನಿ ಹಾಗೂ ಸಿಬ್ಬಂದಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.