ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮತ್ತು ಬಸವರಾಜಪ್ಪ ಮುತ್ಯಾನ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗಿ ನಡೆಯಿತು.ಮುಂಜಾನೆ 8ಗಂಟೆಗೆ ದೇವರು ಗಂಗೆ ಸ್ಥಳಕ್ಕೆ ಹೋಗಿ ಊರಿನ ಪ್ರಮುಖ ಬೀದಿಗಳಲ್ಲಿ ಡೊಳ್ಳು,ವಾಲಗ ಕುಣಿತದೊಂದಿಗೆ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು,ಸಾವಿರಾರು ಭಕ್ತರು ದೇವರ ಆಶೀರ್ವಾದ ಪಡೆದರು.
ಶ್ರೀ ಬಸವರಾಜಪ್ಪ ಮುತ್ಯಾ ಜಾತ್ರೆಯಲ್ಲಿ ಊರಿನ ಯುವಕರೆಲ್ಲಾ ಸೇರಿ ಒಂದೇ ಬಣ್ಣದ ಬಟ್ಟೆಗಳನ್ನು ಹಾಕಿ ಡೊಳ್ಳು,ವಾಲಗ ಬಾರಿಸುವುದರ ಮೂಲಕ ಜನರ ಗಮನ ಸೆಳೆದರು ಜಾತ್ರೆಯಲ್ಲಿ ವೇಷಗಾರರು ತಮ್ಮದೆಯಾದ ವೇಷ ಭೂಷಣದ ಮೂಲಕ ಹೆಜ್ಜೆಯನ್ನು ಹಾಕಿ ಭಕ್ತರ ಮನಸ್ಸನ್ನು ಸಂತೋಷಗೊಳಸಿದರು.ರಾತ್ರಿ ಡೊಳ್ಳಿನ ಪದಗಳನ್ನು ಹಾಡಿದರು,ಬಸವರಾಜಪ್ಪ ಮುತ್ಯಾನ ಪಟ್ಟದ ಆಳಾದ ಶ್ರೀ ಜಂಗಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಎಲ್ಲಾ ಭಕ್ತ ಸಮೂಹ,ಜಾತ್ರಾ ಕಮಿಟಿ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.
ವರದಿ:ಉಸ್ಮಾನ ಬಾಗವಾನ