ಬಾಗೇಪಲ್ಲಿ:ಅನಾಥೆಯ ಮನೆ ನೆಲೆಸಮ ಮಾಡಿ 5 ದಿನಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆಂದು ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್ ಆರೋಪಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1987ರಲ್ಲಿ ಪಟ್ಟಣದ 1ನೇ ವಾರ್ಡ್‍ನಲ್ಲಿ ಸರ್ವೆ ನಂ 156ರಲ್ಲಿ ಅರ್ಧ ಗುಂಟೆ ಜಾಗವನ್ನು ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ವಡ್ಡರ ನಾರಾಯಣಪ್ಪ ಎಂಬುವವರು ಎದುಲನ್ನ ಚಿನ್ನವೆಂಕಟಸ್ವಾಮಿ ರವರಿಂದ ಖರೀದಿ ಮಾಡಿ ಕಲ್ಲು ಬಂಡೆಗಳ ಮನೆ ನಿರ್ಮಿಸಿಕೊಂಡು ಕಳೆದ 40 ವರ್ಷಗಳಿಂದ ಈ ಮನೆಯಲ್ಲಿ ವಾಸವಾಗಿದ್ದರು.ನಾರಾಯಣಪ್ಪ ಮತ್ತು ವೆಂಕಟಲಕ್ಷ್ಮಮ್ಮ ರವರು ಮೃತಪಟ್ಟಿದ್ದು ಇವರಿಗೆ ಅಮೃತ ಎಂಬ ಮೊಮ್ಮಗಳು ಇದ್ದಾರೆ.ಅಮೃತ ರವರ ತಂದೆ ತಾಯಿ ಸಹ ಮೃತಪಟ್ಟಿದ್ದಾರೆ ಸದ್ಯಕ್ಕೆ ಇವರು ತನ್ನ ಸೋದರತ್ತೆ ರತ್ನಮ್ಮ ಎಂಬುವರ ಆಶ್ರಯದಲ್ಲಿ ಇದೇ ಮನೆಯಲ್ಲಿ ವಾಸವಾಗಿದ್ದಾರೆ.ಈ ಅನಾಥ ಹೆಣ್ಣು ಮಗು 10ನೇ ತರಗತಿ ಉತ್ತೀರ್ಣಳಾಗಿದ್ದಾಳೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.