ವಿಜಯಪುರ:ದಿ:31/05/2024 ರ ಶುಕ್ರವಾರದಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಶ್ರಯ ಕಾಲೋನಿ ಡೋಣೂರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ ವಸಂತ ರಾಠೋಡರವರು ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಹಾಗೂ ಡಿಕ್ಷನರಿಗಳನ್ನು ವಿತರಿಸುವುದರ ಮೂಲಕ ಶಾಲಾ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಶಾಲೆಯ ಸಮಸ್ಯೆಗಳ ಕುರಿತು ಚರ್ಚಿಸಿ ಎರಡು ತರಗತಿ ಕೊಠಡಿಗಳನ್ನು ಮಂಜೂರು ಮಾಡಿದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಎರಡು ಕೊಠಡಿಗಳನ್ನು ನೀಡುವುದಾಗಿ ತಿಳಿಸಿದರು.
ಶಾಲೆಗೆ ಕಾಯ್ದಿರಿಸಿದ ಸ್ಥಳದಲ್ಲಿ ಮುಳ್ಳುಗಿಡಗಳು ಬೆಳೆದಿದ್ದು ಅವುಗಳನ್ನ ಸ್ವಚ್ಚಗೊಳಿಸಿ ಶಾಲೆಗೆ ಮೂಲಭೂತ ಸೌಕರ್ಯಗಳನ್ನ ನೀಡುವಂತೆ ಗ್ರಾಮ ಪಂಚಾಯತಿಗೆ ಮನವಿ ಮಾಡುವಂತೆ ಸೂಚಿಸಿದರು. ನಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಇರದ ಕಾರಣ ಬೇಗ ಬಿಸಿಯೂಟದ ಅಧಿಕಾರಿಗಳಿಗೆ ವರದಿನೀಡಿ ಅನುಮತಿ ಪಡೆದು ಸದ್ಯದಲ್ಲಿ ಅಡುಗೆ ಪ್ರಾರಂಭಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸಿ.ಆರ್.ಪಿ ಗಳಾದ ಶ್ರೀ ಎಚ್ ಎಸ್ ಡೊಮನಾಳ,ಎಸ್ ಡಿ ಎಂ ಸಿ ಸದಸ್ಯರಾದ ಶ್ರೀಮಂತ ನಡಗೇರಿ ˌ ಶಾಲೆಯ ಮುಖ್ಯಗುರುಗಳು ಸಿಬ್ಬಂದಿವರ್ಗ ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.