ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲೋಕಸಭೆ ಚುನಾವಣೆ:ಎಕ್ಸಿಟ್ ಪೋಲ್ ಬಗ್ಗೆ ವಿಭಿನ್ನ ಚರ್ಚೆ

ಬಾಗಲಕೋಟೆ:ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಬಗ್ಗೆ ಬಹುದೊಡ್ಡ ಪ್ರಮಾಣದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಮತದಾನೋತ್ತರ ಸಮೀಕ್ಷೆಗಳನ್ನು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಒಪ್ಪುತ್ತಿಲ್ಲ.ಮತದಾನೋತ್ತರ ಸಮೀಕ್ಷೆಗೂ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಚುನಾವಣೆಯಲ್ಲಿ 295 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಘಟಬಂಧನ ಮೈತ್ರಿ ಕೂಟವು ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದರು. ಎಕ್ಸಿಟ್ ಫುಲ್ ಸಮೀಕ್ಷೆ ಬಳಿಕವೂ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.ಇದು ಈಗ ಕೇವಲ ದೆಹಲಿ ವಿಷಯವಾಗಿ ಉಳಿದಿಲ್ಲ ನಾಲ್ಕು ಮನೆ ಹಳ್ಳಿಗಳಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ.
ಮತದಾನೋತ್ತರ ಸಮೀಕ್ಷೆಗಳು ಹೆಚ್ಚಾಗಿ ಸತ್ಯಕ್ಕೆ ಸಮೀಪವಾಗಿರುತ್ತವೆ ಎನ್ನುವ ಒಂದು ವಾದವಿದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ಇವೆ ಆದರೆ ಕಳೆದ ವರ್ಷ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಹುತೇಕ ಸಮೀಕ್ಷೆಗಳನ್ನು ಹುಸಿಗೊಳಿಸಿದ ಫಲಿತಾಂಶ ಹೊರ ಬಿದ್ದಿತ್ತು.ಉದಾಹರಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಿತು.
ಕರ್ನಾಟಕ ವಿಧಾನಸಭೆಗೆ ಚುನಾವಣೆ ಫಲಿತಾಂಶ ಗಮನಿಸಿರುವ ಬಹುತೇಕರು ಸಮೀಕ್ಷೆಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ ಜತೆಗೆ ಸಮೀಕ್ಷೆಗಳು ಸರ್ಕಾರದ ಪರವಾಗಿರುವ ಸಮೀಕ್ಷೆಗಳು ಎನ್ನಲಾಗುತ್ತಿದೆ.
ಮತದಾನೋತ್ತರ ಎಕ್ಸಿಟ್ ಪೂಲ್ ಸಮೀಕ್ಷೆ ಏನೇ ಆಗರಲಿ,ಫಲಿತಾಂಶ ಹೊರ ಬಿದ್ದಾಗಲೇ ನಿಜಾಂಶ ಹೊರ ಬರಲಿದೆ ಮತದಾರು ಯಾರ ಪರ ನಿಲುವು ವ್ಯಕ್ತ ಪಡಿಸಿದ್ದಾರೆ ಎನ್ನುವುದು ತಿಳಿಯದಿದೆ.ಜೂನ್ ನಾಲ್ಕು ಮಂಗಳವಾರದಂದು ಕಾಯ್ದು ನೋಡುವ ಎನ್ನುವ ನೀತಿಗೆ ಬಹುತೇಕರು ಅಂದುಕೊಂಡಿದ್ದಾರೆ .
ಮತದಾನೋತ್ತರ ಎಕ್ಸಿಟ್ ಫುಲ್ ಸಮೀಕ್ಷೆಗಳಿಂದ ಸಂತಸಗೊಂಡವರ ಪಡೆ ಬಹುದೊಡ್ಡ ಪ್ರಮಾಣದಲ್ಲಿದ್ದರೂ ಎಲ್ಲೋ ಒಂದು ಕಡೆ
ಹೇಗೊ ಏನೋ ಎನ್ನುವ ಅಳಕು ಇದ್ದೆ ಇರುತ್ತದೆ ನಿಜವಾದ ಫಲಿತಾಂಶ ಬರಲಿ ಆಗ ನೋಡೋಣ ಎನ್ನುತ್ತಿದ್ದಾರೆ.
ಮತದಾನೋತ್ತರ ಎಕ್ಸಿಟ್ ಫುಲ್ ಸಮೀಕ್ಷೆ ಹೊರತಾಗಿಯೂ ಜನತೆಯಲ್ಲಿ ಜೂನ್ 4ರ ಫಲಿತಾಂಶಕ್ಕಾಗಿ ಬಾರಿ ಕುತೂಹಲ ಹೆಚ್ಚಿದ್ದು ಮಂಗಳವಾರದಂದು ಫಲಿತಾಂಶ ಹೊರಬೀಳಲು ಕ್ಷಣಗಣನೆ ಆರಂಭಗೊಂಡಿದೆ.

ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಈಗಾಗಲೇ ಸತತ ನಾಲ್ಕು ಬಾರಿ ಗೆಲುವಿನ ದಾಖಲೆ ನಿರ್ಮಿಸಿದ್ದಾರೆ ಈ ಬಾರಿ ಐದನೇ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಭರವಸೆಯಲ್ಲಿದ್ದಾರೆ.

ಈ ಬಾರಿ ಹಳೆ ಮುಖಕ್ಕೆ ಮತ್ತೆ ಅವಕಾಶ ಕೊಡ್ತಾರಾ? ಇಲ್ಲ ಹೊಸ ಮುಖ ಸಂಯುಕ್ತಾ ಪಾಟೀಲ್ ಅವರಿಗೆ ಮಣೆ ಹಾಕ್ತಾರಾ?ನಾಳೆಯವರೆಗೆ ಕಾದು ನೋಡಬೇಕಾಗಿದೆ…

ವರದಿ:ಮಹೆಬೂಬ್ ಎಂ ಬಾರಿಗಡ್ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ