ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಹೋಬಳಿ ವಲಯದಲ್ಲಿ ನೆಲೋಗಿ ಗ್ರಾಮ ಪಂಚಾಯಿತ್ ನಲ್ಲಿ ಪರಿಷತ್ ಚುನಾವಣೆ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೊಮ್ಮಗ ರವಿ ಕಿರಣಗಿ ಯವರ ಸಹಪಾಠಿಗಳು,ಸ್ನೇಹಿತರು,ಆಪ್ತರು, ಗ್ರಾಮದ ಹಿರಿಯರು- ಕಿರಿಯರು,ಬಂಧು-ಬಳಗದವರೆಲ್ಲರೂ ಸೇರಿ ಇಂದು ಈಶಾನ್ಯ ಪದವಿದಾರರ ಮತಕ್ಷೇತ್ರದ ಶಿಕ್ಷಕ ಹಾಗೂ ಪದವಿದಾರರ ಮತಕ್ಷೇತ್ರವನ್ನು ಇಂದು ನೆಲೋಗಿ ಗ್ರಾಮದಲ್ಲಿ ಅಚ್ಚುಕಟ್ಟಾಗಿ ಮತ್ತು ಶಾಂತಿಯುತವಾಗಿ ಮತ ಚಲಾವಣೆ ನಡೆದಿದೆ ಎಂದು ತಿಳಿಸಿದರು.
ನೆಲೋಗಿ ವಲಯದಲ್ಲಿ ಒಟ್ಟು ಮತದಾರರ ಪಟ್ಟಿಯಲ್ಲಿ 545 ಇದ್ದು ಇದರಲ್ಲಿ 269 ಪುರುಷರು , 53 ಮಹಿಳೆಯರಿದ್ದು ಒಟ್ಟು ಮತ ಚಲಾಯಿಸಿದವರ ಸಂಖ್ಯೆ 322 ಮುಂದಿನ ದಿನ-ಮಾನಗಳಲ್ಲಿ ಕಡ್ಡಾಯವಾಗಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈಸಂದರ್ಭದಲ್ಲಿ ನೆಲೋಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೊಮ್ಮಗ ರವಿ ಕಿರಣಗಿ,ಮುಖಂಡರಾದ ಸೋಮರಾಯ ಸರ್,ಮಲ್ಲಿಕಾರ್ಜುನ ಮಂಗಾ,ಸಮರ್ಥ ಮುರಡಿ,ಬಸವರಾಜದಬಕಿ,ಮಹಾಂತೇಶ ಖೈನೂರ,ರೇವಪ್ಪ ಸಿಳ್ಳಿ,ಮುತ್ತುಗೌಡ ಬಳ್ಳೂಂಡಗಿ,ದೇವು ಮುದ್ದಾ ಹಾಗೂ ಇತರರು ಇದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್