ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ತಹಸೀಲ್ದಾರ್ ಆಫೀಸ್ ಹಾಗೂ ಡಿವೈಎಸ್ಪಿ ಆಫೀಸ್ ನಲ್ಲಿ ಹಮಾರ ಬಾರಹ ಎಂಬ ಚಲನ ಚಿತ್ರವನ್ನು ಬಿಡುಗಡೆ ಮಾಡದಂತೆ ಕೋರಿ ಅರ್ಜಿ ನೀಡಲಾಯಿತು.ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರರಾದ ದೇಶನೂರ ಖಾಜಾ ಅತುವುಲಾ ಪ್ರೆಸ್ ಮೆಹಬೂಬ್ ಬಾಷಾ ಸಮೀರ್ ಸಲೀಂ ಮತ್ತು ಇನ್ನೂ ಇತರರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ದೇಶನೂರು ಖಾಜಾ ಅವರು ಈ ಚಲನಚಿತ್ರದ ಬಗ್ಗೆ ಮಾತನಾಡುತ್ತಾ ಇದೇ ಜೂನ್ 7 ರಂದು ಬಿಡುಗಡೆ ಆಗಲಿರುವ ಹಮಾರ ಬಾರಹ ಎಂಬ ಚಲನಚಿತ್ರ ದೇಶದ್ಯಾಂತ ಬಿಡುಗಡೆ ಆಗಲಿದೆ.
ಸದರಿ ಚಲನಚಿತ್ರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಮತ್ತು ಮುಸ್ಲಿಮರ ವಿರುದ್ಧ ಮತ್ತು ಮಹಿಳೆಯರ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಮತ್ತು ಅವಹೇಳನಕಾರಿ ಮಾತುಗಳನ್ನು ಹೇಳಲಾಗಿದೆ. ಕೋಮಿನವರಿಗೆ ಕೀಳಾಗಿ ನೋಡಲಾಗಿದೆ.ಹಿಂದೂ ಮುಸ್ಲಿಂರ ಮಧ್ಯೆ ವಿಷಬೀಜ ಹಾಕಲಾಗಿದೆ. ಮುಸ್ಲಿಂರನ್ನು ಹಿಂದೂ ವಿರೋಧಿ ತರಹ ಬೆಂಬಲಿಸಲಾಗಿದೆ.ಇಂತಹ ಅನೇಕ ರೀತಿಯಾದ ಲೋಪದೋಷಗಳು ಸದರಿ ಹಮಾರೆ ಬಾರಹ ಚಿತ್ರದ ಟ್ರೈಲರ್‌ನಲ್ಲಿ ತೋರಿಸಲಾಗಿದೆ.
ಈ ಚಲನಚಿತ್ರ ಸಂಪೂರ್ಣವಾಗಿ ಮುಸ್ಲಿಂ ವಿರುದ್ಧ ಮಾಡಲಾಗಿದೆ ಆದ್ದರಿಂದ ಸೆನ್ಸಾರ್ ಬೋರ್ಡ್ ಮುಖ್ಯವಾಗಿ ಚಲನಚಿತ್ರ ಬಿಡುಗಡೆ ಆಗುವುದಕ್ಕಿಂತ ಮುಂಚಿತವಾಗಿ ಸಂಪೂರ್ಣವಾಗಿ ನೋಡಿ ತನಿಖೆ ಮಾಡಿ ಒಳ್ಳೆಯವನ್ನು ಇಟ್ಟು ಕೆಟ್ಟಿದ್ದನ್ನು ತೆಗೆದುಹಾಕಿ ಬಿಡುಗಡೆ ಮಾಡುವುದು ಸೆನ್ಸರ್ ಬೋರ್ಡ್ ಗೆ ಅಧಿಕಾರವಿದೆ.ಸದರಿ ಚಲನಚಿತ್ರದಲ್ಲಿ ಇಷ್ಟೊಂದು ಲೋಪದೋಷಗಳು ಇದ್ದರೂ ಸೆನ್ಸಾರ್ ಬೊರ್ಡ್ ಸದರಿ ಚಲನಚಿತ್ರ ಬಿಡುಗಡೆ ಮಾಡಲು ಅನುಮತಿ ಕೊಟ್ಟಿದೆ.
ಇಂತಹ ಚಿತ್ರಗಳಿಗೆ ಅನುಮತಿ ಕೊಟ್ಟರೆ ದೇಶದಲ್ಲಿ ಜಾತಿ ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ.ದೇಶದಲ್ಲಿ ಇರುವಂತಹ ಒಂದು ಧರ್ಮಕ್ಕೆ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿ,ದೇಶದಲ್ಲಿ ಆಶಾಂತಿ ಹುಟ್ಟಿಸುವುದು ಮುಸ್ಲಿಂ ಧರ್ಮದವರ ಭಾವನೆಗಳಿಗೆ ದಕ್ಕೆ ಉಂಟು ಮಾಡುವುದು ಒಂದು ಷಡ್ಯಂತರವಾಗಿದೆ.ಚಲನಚಿತ್ರಗಳು ಸಮಾಜದಲ್ಲಿ ಒಂದು ಮಾರ್ಗದರ್ಶನವಾಗಬೇಕು ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಶ ಭಾವನೆ ಮೂಡಿಸುವುದಿಲ್ಲ.
ಆದ್ದರಿಂದ ಮಾನ್ಯರೆ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಮುಖಾಂತರ ಮಾನ್ಯ ಮುಖ್ಯಂತ್ರಿಗಳಿಗೆ ನಮ್ಮ ಮುಸ್ಲಿಂ ಸಮಾಜದ ವತಿಯಿಂದ ಸದರಿ ಮನವಿಯನ್ನು ಶಾಂತಿಯಿಂದ ನೀತಿ ಸಂಹಿತೆ ಪಾಲನೆ ಮಾಡಿ ಸದರಿ ಚಲನಚಿತ್ರ ಬಿಡುಗಡೆ ಮಾಡಬಾರದು ಎಂದು ಮನವಿ ಕೋರಿದರು.
ವರದಿ:ಎಸ್ ಎ ನಿಜಾಮ್