ದಾವಣಗೆರೆ ಜಿಲ್ಲಾ ಹರಿಹರ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಾರ್ವಜನಿಕರೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರ ಮನೆಯ ಮುಂಭಾಗದ ರಸ್ತೆಯ ಅಕ್ಕಪಕ್ಕದ ಬದಿಯಲ್ಲಿ 10 ಸಸಿಗಳನ್ನು ನೆಡುವ ಮೂಲಕ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೆಚ್ಚುತ್ತಿರುವ ಕೈಗಾರೀಕರಣ,ನಗರೀಕರಣ ಅಬ್ಬರದಲ್ಲಿ ನಾವುಗಳೆಲ್ಲರೂ ಪರಿಸರ ಪ್ರಜ್ಞೆ ಮರೆಯುತ್ತಿದ್ದೇವೆ ಪ್ರಕೃತಿ ಮುನಿಸಿಕೊಳ್ಳುವ ಮೊದಲು ನಾವುಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶುದ್ಧ ಗಾಳಿ,ನೀರು ಸಿಗುವುದಿಲ್ಲ ಆದಕಾರಣ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಬೇಕು.ಮಾನವರ ಒಳಿತಿಗಾಗಿ,ವನ್ಯ ಜೀವಿಗಳ ರಕ್ಷಣೆಗಾಗಿ,ಆರೋಗ್ಯ ಪೂರ್ಣ ಜೀವನಕ್ಕೆ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತರು ಅಮರೇಗೌಡ ಮಲ್ಲಾಪೂರ,ಶಂಕರಗೌಡ ಎಲೆಕೂಡ್ಲಿಗಿ,ಆದನಗೌಡ ಎಲೆಕೂಡ್ಲಿಗಿ,ವೀರನಗೌಡ ಹೊಸಳ್ಳಿ (ಸಿರಗುಪ್ಪ),ವೆಂಕನಗೌಡ ಬಳಗಾನೂರ ಹಾಗೂ ಕುರುಬರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.