ಮುಂಡಗೋಡ:ಶಾಸಕರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ಅವರು ರವಿವಾರ ತಾಲೂಕಿನ ಪಾಳಾ ಗ್ರಾಮದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನ ನೂತನ ಶಾಖೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಕೆ.ಡಿ.ಸಿ.ಸಿ ಬ್ಯಾಂಕ್ ನ ಶತಮಾನೋತ್ಸವ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ 54 ಶಾಖೆಗಳನ್ನು ಪ್ರಾರಂಭಿಸುವ ಕುರಿತು ತಿರ್ಮಾನಿಸಲಾಗಿತ್ತು ಅದರಂತೆ ಪಾಳಾ ಗ್ರಾಮದಲ್ಲಿ ನೂತನ ಶಾಖೆಗೆ ಚಾಲನೆ ನೀಡಲಾಗಿದೆ.ಬ್ಯಾಂಕ್ ನ ಪ್ರಗತಿಗೆ ಗ್ರಾಹಕರ ವಿಶ್ವಾಸ ಮುಖ್ಯವಾಗಿದೆ ಹಾಗೂ ಸಹಕಾರಿ ಕ್ಷೇತ್ರ ಎಲ್ಲಿ ಉತ್ತಮವಾಗಿದೆಯೋ ಅಲ್ಲಿ ರೈತರು ಜೀವಂತವಾಗಿದ್ದಾರೆ.ಎಲ್ಲಿ ಸಹಕಾರಿ ಕ್ಷೇತ್ರ ಜೀವಂತವಾಗಿಲ್ಲವೋ ಅಲ್ಲಿ ರೈತರು ಕೂಡಾ ಕಷ್ಟಕರ ಜೀವನ ನಡೆಸುತ್ತಿದ್ದಾರೆ ಸರ್ಕಾರದ ಅನುದಾನ ರೈತರಿಗೆ ಸಿಗಬೇಕಾದಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಮೋಹನದಾಸ್ ನಾಯಕ, ನಿರ್ದೇಶಕರಾದ ಪ್ರಮೋದ ದವಳೆ, ಎಲ್.ಟಿ.ಪಾಟೀಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜ್ಞಾನೇಶ್ವರ ಗುಡಿಯಾಳ, ಪ್ರಧಾನ ಕಾರ್ಯದರ್ಶಿ ಗೋಪಾಲ ಪಾಟೀಲ್,ಪ್ರಮುಖರಾದ ಚಂದ್ರು ಗೌಡ್ರು, ಚೇತನ್ ನಾಯ್ಕ,ಬ್ಯಾಂಕ್ ನ ಎಮ್.ಡಿ ಶ್ರೀಕಾಂತ ಭಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.