ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕ್ಷಿತಿಜ ಸೌಹಾರ್ದ ವಿವಿದೋದ್ದೇಶ ಸಹಕಾರಿ ನಿರ್ದೇಶಕರಿಗೆ ಆಡಳಿತ ನಿರ್ವಹಣೆ ಹಾಗೂ ಪರಿಣಿತಿ ತರಬೇತಿ

ಕೊಟ್ಟೂರು:ಪಟ್ಟಣದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರಂಜನ್ ಚಟ್ರಿಕಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್ ಇವರು ಕ್ಷಿತಿಜ ಸೌಹಾರ್ದ ವಿವಿದೋದ್ದೇಶ ಸಹಕಾರಿ ಆಡಳಿತ ಮಂಡಳಿ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಆಡಳಿತ ನಿರ್ವಹಣೆ ಹಾಗೂ ಪರಿಣಿತಿ ತರಬೇತಿ ನೀಡಲಾಯಿತು ಎಂದು ಸಿಇಓ ಎಂ.ಚನ್ನವೀರಗೌಡ ತಿಳಿಸಿದರು.
ಕ್ಷಿತಿಜ ಸೌಹಾರ್ದ ವಿವಿದೋದ್ದೇಶ ಸಹಕಾರಿ ಕಛೇರಿಯಲ್ಲಿ ಜೂನ್ 8 ರಂದು ನಡೆದ ಮಾಸಿಕ ಸಭೆಯಲ್ಲಿ ನಿರ್ದೇಶಕರಾದ ಪಿ.ಎಂ.ಈಶ್ವರಯ್ಯ ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅವರು ನೀಡಿದ 2 ದಿನಗಳ ಆಡಳಿತ ನಿರ್ವಹಣೆ ಹಾಗೂ ಪರಿಣಿತಿ ಕುರಿತು ತರಬೇತಿ ಪಡೆದುಕೊಂಡು ಬಂದಿರುವುದಾಗಿ ಸಿಇಓ ಚನ್ನವೀರಗೌಡ ಸಭೆಗೆ ತಿಳಿಸಿದರು.
ಅನಂತರ ಮಾತನಾಡಿ ಸಹಕಾರಿಯ ಉಳಿದ ಆಡಳಿತ ಮಂಡಳಿ ನಿರ್ದೇಶಕರಿಗೆ ಪಿ.ಎಂ. ಈಶ್ವರಯ್ಯ ಅವರು ತರಬೇತಿ ಸಂದರ್ಭದಲ್ಲಿ ಪಡೆದ ಸದೃಢ ಸಹಕಾರಿ ಬೆಳವಣಿಗೆಗೆ ಅವಶ್ಯಕ ಮಾಹಿತಿ ಕುರಿತು ತಮ್ಮ ಅನುಭವಗಳನ್ನು ಇತರೆ ನಿರ್ದೇಶಕರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಸಭೆಗೆ ತಿಳಿಸಿದರು.

ಪಿ.ಎಂ. ಈಶ್ವರಯ್ಯ ಮಾತನಾಡಿ ಸಹಕಾರಿ ಹುಟ್ಟು ಹಾಗೂ ಬೆಳವಣಿಗೆ ಮತ್ತು ಸಹಕಾರಿ ಕ್ಷೇತ್ರದ ಸಹಕಾರಿಗಳ ನಿರಂತರ ಹೋರಾಟ,ಸ್ವಾವಲಂಬನೆ, ಸ್ವತಂತ್ರ,ಸ್ವನಿಯಂತ್ರಣ ಹಾಗೂ ಸಹಕಾರಿಯನ್ನು ಅರ್ಥಿಕವಾಗಿ ಹೇಗೆ ಸದೃಢವಾಗಿ ರೂಪಿಸುವುದು, ಮತ್ತು ನಿರ್ದೇಶಕರಾಗಿ ನಮ್ಮ ಕರ್ತವ್ಯಗಳೇನು , ಸಿಬ್ಬಂದಿಗಳ ಜವಾಬ್ದಾರಿಗಳು ಯಾವುವು, ಗ್ರಾಹಕರೊಂದಿಗೆ ನಮ್ಮ ಸಹಕಾರ ಹೇಗಿರಬೇಕು ಎನ್ನುವ ಅನೇಕ ವಿಚಾರಗಳ ಕುರಿತು ಸಹ ನಿರ್ದೇಶಕರಿಗೆ ಮಾಹಿತಿ ನೀಡಿದರು.
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರಂಜನ್ ಚಟ್ರಿಕಿ ಮಾತನಾಡಿ ಪ್ರತಿಯೊಂದು ಸಂಸ್ಥೆ ಒಂದು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಾದರೆ ನಮ್ಮಲ್ಲಿರುವ ಸಹಕಾರಿ ಸೌಲಭ್ಯಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಶ್ರಮವಹಿಸಿ ಕಾರ್ಯನಿರ್ವಹಿಸಿದಾಗ ನಿರ್ವಹಿಸಿದಾಗ ಮಾತ್ರ ಅರ್ಥಿಕ ಕ್ಷೇತ್ರದಲ್ಲಿ ಯಶಸ್ವಿ ಕಾಣಲು ಸಾದ್ಯ ಎಂದರು ಕರ್ನಾಟಕ ಬ್ಯಾಂಕ್ ನಲ್ಲಿ ಸರ್ಕಾರದಿಂದ ಜನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.2014 ರಿಂದ ಇತ್ತೀಚಿನ ದಿನಗಳವರೆಗೆ ಬ್ಯಾಂಕ್ ನಿಂದ ಸಾಮಾನ್ಯ ಜನರಿಗೆ ಆಗುತ್ತಿರುವ ಲಾಭದಾಯಕ ಸೌಲಭ್ಯಗಳ ಬಗ್ಗೆ ಮಾಹಿತಿ ಹೆಚ್ಚಾಗಿ ಸಿಗಲಾರಂಭಿಸಿದೆ ಆದ್ದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಉಳಿತಾಯ ಖಾತೆ ಅವಶ್ಯಕತೆ ಇದೆ ಎಂದು ಜನರು ಮನಗೊಂಡಿದ್ದಾರೆ ಎಂದರು.
ಸಿಬ್ಬಂದಿಗಳ ನಡುವಿನ ಅತ್ಮವಿಶ್ವಾಸ ನಮ್ಮನ್ನು ಯಾವರೀತಿ ವೃತ್ತಿಯಲ್ಲಿ ಪಜೀತಿಗೆ ಸಿಲುಕಿಸುತ್ತೇವೆ ಎಂದು ಉದಾಹರಣೆ ಸಹಿತ ವಿವರಿಸಿದ್ದಲ್ಲದೆ ಒಂದು ಆರ್ಥಿಕ ಸಂಸ್ಥೆ ಎಂದ ಮೇಲೆ ನಮ್ಮೆಲ್ಲರ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತವೆ.ಸಾಲ ಮಂಜೂರಾತಿ,ಸಾಲ ಮರುಪಾವತಿ ಬಹಳ ಮುಖ್ಯವಾದ ಕೆಲಸ ಜನರ ಠೇವಣಿಗಳೇ ನಮ್ಮ ಸಂಸ್ಥೆಯ ಬಂಡವಾಳ ಅದ್ದರಿಂದ ಜನರೊಂದಿಗೆ ಸೌಹಾರ್ದಯುತವಾಗಿ ವ್ಯವಹಾರ ನಡೆಸಬೇಕು ಜೊತೆಗೆ ಸಮಾಜದ ನಂಬಿಕೆಗೆ ಅರ್ಹರಾಗಬೇಕು ಉಳಿತಾಯ ಖಾತೆ ಎನ್ನುವುದು ಪ್ರತಿಯೊಂದು ಆರ್ಥಿಕ ಸಂಸ್ಥೆಯ ಶಕ್ತಿ ಇದ್ದಂತೆ ಆದ್ದರಿಂದ ಠೇವಣಿ ಸಂಗ್ರಹಣೆ ನಿರ್ವಹಣೆ ಬಹಳ ಮುಖ್ಯ ಎಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್ ಬಿ.ಜಿ.,ಕ್ಷಿತಿಜ ಸೌಹಾರ್ದ ವಿವಿದೋದ್ದೇಶ ಸಹಕಾರಿ ಅಧ್ಯಕ್ಷರಾದ ಹೆಚ್.ಸುರೇಶ್ ಹಾಗೂ ಸಹಕಾರಿ ಸಿಇಓ ಎಂ ಚನ್ನವೀರಗೌಡ ಇವರು ಅರ್ಥಿಕ ನಿರ್ವಹಣೆ ತರಬೇತಿ ನೀಡಿದ ನಿರಂಜನ್ ಚಟ್ರಿಕಿ ಹಾಗೂ ಶಿವಕುಮಾರ್ ಇಬ್ಬರು ವ್ಯವಸ್ಥಾಪಕರಿಗೆ ಸಹಕಾರಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಹಕಾರಿ ನಿರ್ದೇಶಕರಾದ ಹೆಚ್. ರುದ್ರಪ್ಪ, ಕೆ ಅನಿಲ್ ಕುಮಾರ್,ಬಿ.ವಿರುಪಾಕ್ಷಪ್ಪ , ಪಿ.ಬಸವರಾಜ,ಶ್ಯಾಮಸುಂದರಗೌಡ,ಆರ್. ಎಂ. ಗುರುಬಸವರಾಜ,ಸಿ.ಪ್ರಭು ಪಿಗ್ಮಿ ಏಜೆಂಟ್ ರಾಜಶೇಖರ ಎಂ.ಹಾಗೂ ಮುಖ್ಯ ಪ್ರವರ್ತಕರಾದ ಕೆ. ರಾಮಣ್ಣ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ