ಶಿವಮೊಗ್ಗ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಶಿವಮೊಗ್ಗ ಮತ್ತು ಜಿಲ್ಲಾ ಆಯುಷ್ ಕಛೇರಿ ಶಿವಮೊಗ್ಗ ವತಿಯಿಂದ ಜೂನ್-21ರ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಪೂರ್ವಭಾವಿಯಾಗಿ ಜೂ.11 ರಂದು ನಗರದ ಬಸವೇಶ್ವರನಗರದ ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಯೋಗೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಡಾ॥ ಲಿಂಗರಾಜ ಎಸ್ ಹಿಂಡಸಗಟ್ಟಿ.,ಜಿಲ್ಲಾ ಆಯುಷ್
ಅಧಿಕಾರಿಗಳು ಶಿವಮೊಗ್ಗ ಮತ್ತು ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿರೇಂದ್ರಕುಮಾರ ಬಿ ಯು.ಮತ್ತು ಉಪ ಪ್ರಾಂಶುಪಾಲೆ ಶ್ರೀಮತಿ ಮಂಗಳಾ ಉದ್ಘಾಟಿಸಿದರು.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಉಂಬಳೇಬೈಲು ಮುಖ್ಯ ವೈದ್ಯಾಧಿಕಾರಿ ಡಾ॥ ಜ್ಯೋತಿಲಕ್ಷ್ಮೀ ಪಾಟೀಲ್ ರವರು ಆಯುಷ್ ಪರಿಚಯ,ಯೋಗದ ಪ್ರಾಮುಖ್ಯತೆ,ದಿನಚರ್ಯ ಮತು ವೃತುಚರ್ಯ,ಹದಿಹರೆಯದ ಸಮಸ್ಯೆಗಳಿಗೆ ಆಯುರ್ವೇದ ಮತ್ತು ಯೋಗ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿದರು.ಯೋಗ ತರಬೇತುದಾರರಾದ ಶ್ರೀಮತಿ ಮಂಗಳಾ ಜಿ.ಹೆಚ್.ಇವರು ಯೋಗದ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗದವರು ಸೇರಿ ಒಟ್ಟು 170 ಜನ ಭಾಗವಹಿಸಿದ್ದರು.
ವರದಿ:ಕೊಡಕ್ಕಲ್ ಶಿವಪ್ರಸಾದ್