ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚಿರ ಕ್ರಾಂತಿ ಒಂದು ಅವಲೋಕನ…

ರಾಯಚೂರು ಜಿಲ್ಲೆಯ ಯುವ ಲೇಖಕರು ಹಾಗೂ ಶಿಕ್ಷಕರಾದ ಚಿರಂಜೀವಿ.ಪಿ.ರೋಡಕರ್ ಅವರು ರಾಯಚೂರು ಜಿಲ್ಲೆಯ ಕನಾ೯ಟಕ ರಾಜ್ಯ ವೈಜಾನಿಕ ಸಂಶೋಧನಾ ಪರಿಷತ್ತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಜಾತಿ ಪದ್ದತಿ ದೌರ್ಜನ್ಯ ಮಹಿಳಾ ಶೋಷಣೆಗಳ ವಿರುದ್ಧ ಹೋರಾಟದ ಜೊತೆ ಸಾಹಿತ್ಯ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ರೋಡಕರಯವರು ಚಿರಕ್ರಾಂತಿ ಪ್ರಥಮ ಕವನ ಸಂಕಲನ ಹೆಸರಿಗೆ ತಕ್ಕಂತೆ ಉತ್ತಮ ಗುಣಮಟ್ಟದ ಕವನ ಸಂಕಲನ ಒಂದು ರೀತಿಯಲ್ಲಿ ಹೇಳಬೇಕಾದರೆ ಪ್ರತಿಯೊಂದು ಕವನ ಅರ್ಥಪೂರ್ಣ ಹಾಗೂ ಮಾನವೀಯ ಮೌಲ್ಯ ಒಳಗೊಂಡಿದೆ.
ಅನ್ನ ಬೆಳೆಯುವ ರೈತನ ಬದುಕು ಹಣ್ಣಾಗದೆ ಹುಣ್ಣಾಗಿದೆ.
ನಮ್ಮ ಬೆನ್ನೆಲಬು ಆಗಿದವನ ಬೆನ್ನು ಬಾಗಿ ಸಾಗುತ್ತಿದೆ
ರೈತ ನಾಡಿಗೆ ನೀಡುವ ಅನ್ನಧಾತ ಹಗಲು ಇರುಳು ದುಡಿದು ತನ್ನ ಮನೆ ಹಾಗೂ ನಾಡಿಗೆ ಧಾನ್ಯ ನೀಡಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕಾಯಾ ವಾಚಾ ಮನಸಾ ದಿಂದ ಕೆಲಸ ಮಾಡುತ್ತಾನೆ.ರೈತನ ದುಡಿಮೆ ನೀರಿನಲ್ಲಿ ಹುಣಸೆ ತೊಳದಂತೆ ಬಾಡಿ ಹೋಗುತ್ತಿದೆ. ರೈತರ ಪರ ಜನಪರ ಹೇಳುವ ಸರ್ಕಾರಗಳು ರೈತರ ನೆರವಿಗೆ ಬಾರದೆ ನಡ ಮುರಿಯುವ ಹಂತಕ್ಕೆ ಬಂದಿವೆ ಸಾಲಗಳ ಮೇಲೆ ಸಾಲಗಳ ಹೊಡೆತಕ್ಕೆ ನಲುಗಿ ಹೋಗಿದ್ದಾರೆ ಆದರೆ ಪ್ರತಿ ವರುಷ ಸಾವಿರಾರು ರೈತರು ಆತ್ಮಹತ್ಯೆಯ ದಾರಿಯಲ್ಲಿ ಸಾಗಿದ್ದಾರೆ.ಆದರೆ ಜನಪ್ರತಿನಿಧಿಗಳು ಸರ್ಕಾರದ ಉಢಾಪೆ ಮಾತು ಕೇಳಿ ರೈತರು ಕುಗ್ಗಿ ಹೋಗಿದ್ದಾರೆ.ಒಂದು ಕಡೆ ಭೀಕರ ಬರಗಾಲ ಮತ್ತೊಂದು ಕಡೆ ನೆರೆಹಾವಳಿ ಇವುಗಳ ನಡುವೆ ಜೀವನ ಅತಂತ್ರವಾಗಿದೆ 75 ವರುಷ ಕಳೆದರೂ ಕೂಡ ಸಾಲಲ್ಲಿ ಹುಟ್ಟಿ ಸಾಲದಲ್ಲಿ ಸಾಯುವ ರೈತರ ಪಾಡು ನಾಯಿ ಕ್ಕಿಂತ ಕಡೆಯಾಗಿದೆ.
ಒಂಟಿಯಾದಾಗ ತಂಟಿಗೆ ಬಾರದೇ ಗಂಟುಯಿದ್ದಾಗ ಗಂಟೆ ಬಾರಿಸುವ ಅಂಟಿಕೊಂಡು ನಾವುಂಟು ಎನ್ನುವ ನೆಂಟರಿವರು ನೆಂಟರು.
ಹಣ ಆಸ್ತಿ ಇಲ್ಲದಿದ್ದರೆ ಅವನ ಹತ್ತಿರ ಯಾರು ಬರುವುದಿಲ್ಲ ಸಹಾಯ ಮಾಡದೆ ಅಪಮಾನ ಅವಮಾನ ಮಾಡುತ್ತಾರೆ ಕಾಲಚಕ್ರ ತಿರುಗಲೇಬೇಕು ತನ್ನ ದುಡಿಮೆಯಿಂದ ಎತ್ತರಕ್ಕೆ ಬೆಳೆಯುತ್ತಾನೆ ಅವನ ಶ್ರೀಮಂತಿಕೆ ಕಂಡು ಇವನು ನಮ್ಮವನು ಇಂದ್ರ ಚಂದ್ರನಂತೆ ಅವನ ಸೂತ್ತ ಸುತ್ತುತ್ತಾರೆ ಇಂದು ಕಂಡು ಬರುವ ಅಂಶ. ಸಕ್ಕರೆ ಇದ್ದರೆ ಇರುವೆ ಹಾಗೆ ಹಣ ಇದ್ದರೆ ನೆಂಟರು ಇಲ್ಲವಾದರೆ ಕಸಕ್ಕಿಂತ ಕಡೆ,,
ದೇವರು ಹುಡುಕಲು ಊರು ಸುತ್ತಿದರು.ಹೆತ್ತ ದೇವರ ಮರೆತು ಬಿಟ್ಟರು.ಹರಕೆ ತೀರಿಸಲು ಬೆಟ್ಟ ಹತ್ತಿದರು.
ಆ ದೇವರು ಈ ದೇವರು ಹಗಲು ರಾತ್ರಿ ಎನ್ನದೇ ಹೋಮ ಹವನ ಮಾಡುತ್ತ ಕಪಟ ಗುಣಗಳನ್ನು ಇಟ್ಟುಕೊಂಡು ಪೂಜೆ ಮಾಡಿದರೆ ದೇವರು ದರ್ಶನ ಕೊಡುವುದಿಲ್ಲ.ಭಕ್ತಿ ಭಂಡಾರಿ ಬಸವಣ್ಣನವರು ತಂದೆ ತಾಯಿ ಸಾಕ್ಷಾತ್ ಜೀವಂತ ದೇವರು ಅವರನ್ನು ಚೆನ್ನಾಗಿ ರಕ್ಷಣೆ ಮಾಡಿ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಆದರೆ ನಾವು ಮಾಡುತ್ತಿರುವುದು ಏನು? ತಂದೆ ತಾಯಿಗಳನ್ನು ಮನೆಯಿಂದ ಹೊರಗೆ ಹಾಕುವುದು ಅಥವಾ ಅನಾಥ ಶ್ರಮಕ್ಕೆ ಸೇರಿಸುವುದು ಹೆತ್ತವರನ್ನು ನಡುನೀರಲ್ಲಿ ಕೈಬಿಟ್ಟಿದ್ದೇವೆ ಇದು ನಿಜಕ್ಕೂ ನಾಚಿಕೆಗೇಡು ಇನ್ನಾದರೂ ತಂದೆ ತಾಯಿಯ ಸೇವೆ ಮಾಡಿ ಪುನೀತರಾಗೋಣ ಮುಂದಿನ ಜನಾಂಗಕ್ಕೆ ಮಾದರಿಯಾಗುವ ಕೆಲಸ ಮಾಡೋಣ.
ಸಿದ್ದನಾಗು ನೀ ಬೂದಿಯಿಂದ ಹುಟ್ಟಿ ಬರುವವನಾಗು ಮುಗ್ಗರಿಸಿ ಬಿದ್ದ ಪ್ರತಾತದಿಂದ ಎದ್ದು ಬರುವಂತವನಾಗು.
ಅವಮಾನ ಅಪಮಾನಕ್ಕೆ ಎದೆಗುಂದದೆ ಸಾಗಬೇಕಾಗಿದೆ ಜೀವನ ಯೆಂದರೆ ರಸ್ತೆಯಲ್ಲಿ ಬಿದ್ದ ಮುಳ್ಳು ಕಲ್ಲುಗಳನ್ನು ತೆಗೆದು ಸಾಗುತ್ತೇವೆ ಅದೇ ರೀತಿ ಗುಡ್ದದಿಂದ ಜಾರಿ ಕೆಳಗೆ ಬಿದ್ದರೂ ಮೇಲಕ್ಕೆ ಬರಲು ಪ್ರಯತ್ನ ಮಾಡಬೇಕು ಸರ್ ಎಂ ವಿಶ್ವೇಶ್ವರಯ್ಯ ಕೋಲಾರ ಒಂದು ಹಳ್ಳಿಯಿಂದ ಬೆಂಗಳೂರಿಗೆ ನಡೆದುಕೊಂಡು ಉನ್ನತ ಶಿಕ್ಷಣ ಪಡೆದರು ದೊಡ್ಡ ಆಣೆಕಟ್ಟು ನಿರ್ಮಾಣ ಮಾಡುವುದಲ್ಲಿ ಇವರ ಸಾಧನೆ ಬಹಳ ದೊಡ್ಡದು ಇಂದಿಗೂ ಇವರ ಹೆಸರು ಅಜರಾಮರ. ನಿರಂತರ ಹೋರಾಟ ಪರಿಶ್ರಮ ಅಭ್ಯಾಸ ಛಲದಿಂದ ಮಾತ್ರ ಸಾಧ್ಯ.
ಜೀವನವೆಲ್ಲ ನಾಡು-ನುಡಿಗೆ ಮೇರು ಶಿಖರ ಗಂಧದ ಗುಡಿಗೆ ಮೇರು ನಟ ಎನಿಸಿಕೊಂಡ ಡಾ.ರಾಜಕುಮಾರ.
ವರನಟ ಡಾ.ರಾಜಕುಮಾರ ಯವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು ಕನ್ನಡಕ್ಕೆ ಕುತ್ತು ಬಂದಾಗ ಹೋರಾಟದ ದಾರಿ ಹಿಡಿದವರು ಕನ್ನಡ ಅವರ ಉಸಿರು ಜೊತೆ ಜೀವನ ಕೂಡ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಕೇಳಿದರೆ ಅಣ್ಣಾವ್ರ ನೆನಪು ಕಾಡುತ್ತಿದೆ.
ನಟಿಸಿರುವ ನೂರಾರು ಚಲನಚಿತ್ರಗಳು ಜೀವನದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರವಿದೆ ಹೋರಾಟ ನಾಡು ನುಡಿ ಪರಿಸರ ರಾಜಕಾರಣ ರೈತ ಹೇಗೆ ನಾನಾ ತರದ ಪಾತ್ರ ಮಾಡಿದ ಡಾ.ವರನಟ ರಾಜಕುಮಾರ ಅವರು ಯುವ ಪ್ರತಿಭೆಗಳಿಗೆ ಚಲನ ಚಿತ್ರಗಳಲ್ಲಿ ಅವಕಾಶ ನೀಡಿದ ಕರ್ನಾಟಕ ರತ್ನ ಡಾ.ರಾಜ್ ಕುಮಾರ ಯವರು ಕೆಲವೇ ಕೆಲವು ಕಲಾವಿದರಲ್ಲಿ ಇವರು ಒಬ್ಬರು ಸೂರ್ಯ ಚಂದ್ರ ಇರುವವರಿಗೂ ಇವರ ಹೆಸರು ಚಿರಸ್ಥಾಯಿ,
ಲೇಖಕರಾದ ಚಿರಂಜೀವಿ.ಪಿ.ರೋಡ ಕರ್ ಅವರ ಸಾಹಿತ್ಯ ಸೇವೆ ಹೀಗೆ ನಿರಂತರ ಸಾಗಲಿ ಹರಿಯುವ ನದಿಯಾಗಿ ಆಕಾಶದಲಿ ಮಿಂಚುವ ಚುಕ್ಕೆಯಂತೆ ಸದಾ ಬೆಳಗಲಿ.
ಅಭಿನಂದನೆಗಳೊಂದಿಗೆ…

ಲೇಖಕರು:ದಯಾನಂದ ಮ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ