ಗದಗ:ಲಯನ್ಸ ಕ್ಲಬ್ ಆಪ್ ಮೈಸೂರು ಮಿಲೇನಿಯಂ ಹಾಗೂ ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ,ನಿಸರ್ಗ ಸಂಗೀತ ಮಹಾವಿದ್ಯಾಲಯ ಸಂಘ ಹನುಮಸಾಗರ ಮತ್ತು ಸಂಜನಾ ಬಳಗ ಪ್ರತಿಷ್ಠಾನ ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಹೊಸಮಠ ನಟರಾಜ ಶಿಕ್ಷಣ ಸಂಸ್ಥೆಯ ಸೆಮಿನಾರ್ ಹಾಲ್ ದಲ್ಲಿ ಜರುಗಿದ ಮುತ್ತು ವಡ್ಡರವರ ಸಂಪಾದಕೀಯ ನಾಡಿನ ಸಾಧಕರ ಪರಿಚಯದ ಎಲೆ ಮರೆಕಾಯಿಗಳು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ
ಜನಪದ ಕೂಗು ಕಾರ್ಯಕ್ರಮದ ಮೂಲಕ ನಾಡು ನುಡಿಯ ಸೇವೆ ಮಾಡುತ್ತಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಹೊಸಮಠದ ಮಠಾಧ್ಯಕ್ಷರಾದ ಪೂಜ್ಯ ಶ್ರೀ ನಿ.ಪ್ರ.ಸ್ವ ಶ್ರೀ ಚಿದಾನಂದ ಸ್ವಾಮಿಗಳು,ಲಯನ್ಸ ಕ್ಲಬ್ ಮಿಲೇನಿಯಂ ಅಧ್ಯಕ್ಷರಾದ ಎ.ಸಿ.ರವಿ,ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡಿಕೇರಿ ಗೋಪಾಲ,ಮಾಜಿ ಮಲ್ಟಿಪಲ್ ಕೌನ್ಸಿಲ್ ಚೇರ್ಮನರಾದ ಡಾ.ನಾಗರಾಜ ಬೈರಿ,ಮಾಜಿ ಮೈಸೂರು ಕಸಾಪ ಅಧ್ಯಕ್ಷರಾದ ಎಮ್ ಚಂದ್ರಶೇಖರ, ಹಿರಿಯ ಸಾಹಿತಿಗಳು ಡಾ.ನ.ಗಂಗಾಧರಪ್ಪ,
ಪೋಲಿಸ್ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಎಂ ಗೀತಾ,ಚಲನಚಿತ್ರ ನಿರ್ಮಾಪಕಿ ಕೊಡಗಿನ ಈರಮಂಡ್ ಹರಿಣಿ ವಿಜಯ,ಮಲ್ಲಯ್ಯಸ್ವಾಮಿ ಕೋಮಾರಿ,ಒಂ ಸಾಹಿತ್ಯ ಬಳಗದ ಎಮ್ ಕೆ ಜಯಕುಮಾರ,ಲಯನ್ ಸಂಸ್ಥೆಯ ಎನ್ ಸುನಿಲಕುಮಾರ,ಎಮ್ ಜಿ ರಮೇಶ, ಸಾಗರ ಪಿ,ನಿಂಬಾಳ,ವಿನೋದಕುಮಾರ ಪಾಟೀಲ ಸೇರಿದಂತೆ ಕವಿಗಳು ಕಲಾವಿದರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.