ಮುಂಡಗೋಡ:ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಂಡಗೋಡ ಬಿಜೆಪಿ ಮಂಡಲ ದ ಪ್ರಮುಖರು ಮಂಗಳವಾರ ಮುಂಡಗೋಡ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಒತ್ತಾಯ ಮಾಡಿದರು.ಪತ್ರಕರ್ತ ರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲ್ ಟಿ ಪಾಟೀಲ್,ಬಿಜೆಪಿ ಪಕ್ಷ ಹೆಬ್ಬಾರ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟು ಅಧಿಕಾರ ಅನುಭವಿಸುವಂತೆ ಮಾಡಿತು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಜಯ ಸಾಧಿಸಿದರು.ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕಾಗೇರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಾಗ ಹೆಬ್ಬಾರ್ ತಮ್ಮ ಪುತ್ರನನ್ನು ಮತ್ತು ಬೆಂಬಲಿಗರನ್ನು ಕಾಂಗ್ರೆಸ್ ಗೆ ಕಳಿಸಿದರು.ಆದರೂ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 18000 ಮತಗಳ ಲೀಡ್ ಸಿಕ್ಕಿತು.ಹೆಬ್ಬಾರ್ ಬೇರೆ ಪಕ್ಷಕ್ಕೆ ಹೋಗೋದಾದ್ರೆ ಹೋಗಲಿ ಆದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.
ಮಂಡಲ ಅಧ್ಯಕ್ಷ ಮಂಜುನಾಥ್ ಪಾಟೀಲ್ ಮಾತನಾಡಿ ಲೋಕ ಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾರೆ ಆದರೂ ಅಭೂತಪೂರ್ವ ಜಯ ದಾಖಲಿಸಿದೆ.ಹೆಬ್ಬಾರ್ ಅವರ ಬಗ್ಗೆ ನಮಗೆ ಗೌರವವಿದೆ.ಕ್ಷೇತ್ರದಲ್ಲಿ ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಯಾಗಿದೆ.ಇನ್ನಾದರೂ ಹೆಬ್ಬಾರ್ ದೃಢ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ ಮರಳಿ ಪಕ್ಷದ ಕೆಲಸದಲ್ಲಿ ಪಾಲ್ಗೊಳ್ಳಲಿ ಇಲ್ಲವೇ ರಾಜೀನಾಮೆ ಕೊಟ್ಟು ಹೊರ ನಡೆಯಲಿ ಎಂದರು.
ಪತ್ರಿಕಾಗೋಷ್ಠಿ ವೇಳೆ ಬಸವರಾಜ್ ಓಶಿಮಠ. ಸಂತೋಷ್ ತಳವಾರ ಮಂಜುನಾಥ್ ಹರ್ಮಲ್ಕರ್,ದತ್ತಾತ್ರೇಯ ರಾಯ್ಕರ್,ಬಸವರಾಜ್ ತನಿಕೆದಾರ್,ಶ್ರೀಕಾಂತ್ ಸಾನು,ಭರತ ಹದಳಗಿ ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.