ದಾವಣಗೆರೆ:ಹೊನ್ನಾಳಿ ತಾಲೂಕಿನ ತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ಹೋಗಿರುವ ಶೌಚಾಲಯಗಳು,ಅರ್ಧಭಾಗ ಮುರಿದುಹೋಗಿರುವ ಶೌಚಾಲಯದ ಕೊಠಡಿಗಳ ಬಾಗಿಲುಗಳು ತಾಲ್ಲೂಕು ಆಡಳಿತದ ಅನೈರ್ಮಲ್ಯವನ್ನು ಎತ್ತಿ ತೋರಿಸುತ್ತಿವೆ.
ಶೌಚಾಲಯದ ಕೊಠಡಿಗಳು ಸಂಪೂರ್ಣ-ಕೆಂಪು,ಹಳದಿ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿವೆ.ಇನ್ನು ಕೈ ತೊಳೆದುಕೊಳ್ಳುವ ಸಿಂಕುಗಳಿಂದ ನೀರು ಸೋರಿಕೆಯಾಗುತ್ತಿದ್ದು,ಅವುಗಳಿಂದ ಸಣ್ಣ ಪ್ರಮಾಣದಲ್ಲಿ ಹರಿದು ಹೋಗುವ ನೀರನ್ನು ತಡೆಗಟ್ಟುವ,ನಿಯಂತ್ರಿಸುವ ಕೆಲಸಕ್ಕೆ ಕಚೇರಿಯ ಸಿಬ್ಬಂದಿ ಮುಂದಾಗದಿರುವುದು ಸೋಜಿಗದ ಸಂಗತಿ.
ಇನ್ನು ಮೂತ್ರಾಲಯಕ್ಕೆ ಹೋಗಲು ಪುರುಷರಿಗೆಂದೇ ಮೀಸಲಾಗಿರುವ ಜಾಗಗಳಲ್ಲಿ ನೀರಿನ ಪೂರೈಕೆ ಇಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.ಮೂತ್ರ ವಿಸರ್ಜನೆಗೆ ಹೋಗದಂತೆ ಅಡ್ಡಲಾಗಿ ನಿರುಪಯುಕ್ತ ವಸ್ತುಗಳನ್ನು ಇಟ್ಟಿರುವುದರಿಂದ ಅಲ್ಲಿಗೆ ಯಾರೂ
ಹೋಗಲು ಆಗುತ್ತಿಲ್ಲ.
ತಾಲ್ಲೂಕು ಕಚೇರಿಯಲ್ಲಿ ಒಟ್ಟು ನಾಲ್ಕು ಮೂತ್ರಾಲಯಗಳಿದ್ದು,ಒಂದನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಅಲ್ಲಿ ಅಷ್ಟೊಂದು ಸಮಸ್ಯೆ ಇದ್ದರೂ ತಲೆ ಕೆಡಿಸಿಕೊಳ್ಳದೆ ಇರುವುದು ಸೊಜಿಗವೆ ಸರಿ.
ಖಜಾನೆ ಶಾಖೆ ಸಿಬ್ಬಂದಿಗೆ ಮೀಸಲಿರುವ ಇನ್ನೊಂದು ಶೌಚಾಲಯದಲ್ಲೂ ಇದೇ ಸಮಸ್ಯೆ ಇದೆ.
ಡಿ.ದರ್ಜೆ ನೌಕರರಿಂದ ತಹಶೀಲ್ದಾರ್ವರೆಗಿನ ಸುಮಾರು 29 ಸಿಬ್ಬಂದಿ ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.
ವರದಿ ಪ್ರಭಾಕರ್ ಡಿ ಎಂ