ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ರೂಪದಲ್ಲಿ ಭ್ರಷ್ಟಾಚಾರ ಹದ್ದು ಮೀರಿದೆ:ವಿಧಾನ ಪರಿಷತ್ ಶಾಸಕ ಶ್ರೀ ಡಿ ಎಸ್ ಅರುಣ್

ಶಿವಮೊಗ್ಗ:ಇಂದಿನ ನಿಗಮ ಮಂಡಳಿಗಳ ಹಗರಣದ ಕುರಿತು ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾಹಿತಿ ಕೇಳಿದ್ದ ಡಿ.ಎಸ್.ಅರುಣ್.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಇತ್ತೀಚಿಗಷ್ಟೇ ಸಚಿವರ ರಾಜೀನಾಮೆ ಆಗಿದೆ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲೊಂದು ರೂಪದಲ್ಲಿ ಭ್ರಷ್ಟಾಚಾರ ಹದ್ದು ಮೀರಿದೆ.ಆರ್ಥಿಕ ಇಲಾಖೆ ಸಚಿವರಾದ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬರಲಾಗದೆ ಹಗರಣ ನಡೆಯತ್ತಾ? ಮಾನ್ಯ ಮುಖ್ಯಮಂತ್ರಿಗಳ ಒಳಗೊಳ್ಳುವಿಕೆ ನಿಗಮದ ಹಗರಣದಲ್ಲಿ ಇಲ್ಲದಿರುತ್ತದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ನಿಗಮಗಳಲ್ಲಿ ಉಳಿಕೆಯಾದ ಅನುದಾನ ಹಾಗೂ ಆಗುತ್ತಿರುವ ಭ್ರಷ್ಟಾಚಾರದ ಕುರಿತು 151ನೆಯ ವಿಧಾನಮಂಡಲ ಅಧಿವೇಶನದ 14/12/2023 ರಂದೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಪ್ರಶ್ನಿಸಿ,ಮಾಹಿತಿ ನೀಡಲಾಗಿತ್ತು.

31/03/2023ರ ಆರ್ಥಿಕ ವರ್ಷದ ಅಂತ್ಯದಲ್ಲಿ ವಿವಿಧ ನಿಗಮ ಮಂಡಳಿಗೆ ಹಂಚಿಕೆಯಾದ ಅನುದಾನದಲ್ಲಿ ವೆಚ್ಚವಾಗದೆ ಉಳಿಕೆಯಾದ ಅನುದಾನದ ಮಾಹಿತಿಯ ಕುರಿತು ಸದನದಲ್ಲಿ ಪ್ರಶ್ನಿಸಿದಾಗ ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ನಿಗಮ ಮಂಡಳಿಗೆ 1431.25 ಕೋಟಿ ಒದಗಿಸಲಾಗಿದೆ, ಮಹಾಲೇಖಪಾಲರ ಲೆಕ್ಕದನ್ವಯ ಯಾವುದೇ ಅನುದಾನ ಉಳಿಕೆಯಾಗಿರುವುದಿಲ್ಲ ಎಂದು ಸದನದಲ್ಲಿ ಲಿಖಿತ ಮೂಲಕ ನೀಡಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಹಾಗೂ ಸಂಶಯಕ್ಕೆ ಎಡೆಮಾಡಿದೆ ಇಂದಿನ ನಿಗಮ ಮಂಡಳಿಗಳಲ್ಲಿ ಆಗುತ್ತಿರುವ ಹಗರಣಗಳಿಗೆ ಇದೊಂದು ಪ್ರಮುಖ ಕಾರಣವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಮುಂದುವರೆದು ವಿಧಾನಮಂಡಲ ಅಧಿವೇಶನದ 07/12/2023 ರಂದು ಸದನದಲ್ಲಿ ರಾಜ್ಯದ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಲು,ಸಾಮಾನ್ಯವಾಗಿ ತಿಳಿಯದ ಅಥವಾ ಕಾಣಿಸದ ಆಳವಾದ ವಿಷಯವಾದ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯಿತಿ ನಿಧಿ 2 ರಲ್ಲಿ ವೆಚ್ಚವಾಗದೆ ಉಳಿದಿರುವ ಅನುದಾನದ ಬಗ್ಗೆ ರಾಜ್ಯದ ಆರ್ಥಿಕ ಇಲಾಖೆ ಸಚಿವರಾಗಿರುವ ಮಾನ್ಯ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ,ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿ ಸಂಚಿತ ನಿಧಿ 2ರಲ್ಲಿ ದಿನಾಂಕ 31/3/2023ರ ಅಂತ್ಯದಲ್ಲಿ ಜಿಲ್ಲಾ ಪಂಚಾಯತ್ 459 ಕೋಟಿ ಹಾಗೂ ತಾಲೂಕು ಪಂಚಾಯತ್ 1494 ಕೋಟಿ,ಒಟ್ಟಾರೆ 1953 ಕೋಟಿ ವೆಚ್ಚವಾಗದೆ ಉಳುಕೆಯಾದ ಅನುದಾನ ಎಂಬ ಲಿಖಿತ ಮಾಹಿತಿ ನೀಡಿದರು.

ಎರಡನೆಯದಾಗಿ ಉಳಿಕೆಯಾದ ಅನುದಾನವನ್ನು ರಾಜ್ಯದ ಸಂಚಿತನಿಧಿಗೆ ಜಮೆಯಾದ ವಿವರಗಳನ್ನು ಕೇಳಿದಾಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ನಿಧಿ ಎರಡರಲ್ಲಿ ಉಳಿಕೆಯಾದ ಅನುದಾನವನ್ನು ರಾಜ್ಯದ ಸಂಚಿತ ನಿಧಿಗೆ ನಿಯಮಿತವಾಗಿ ಜಮೆಮಾಡಲಾಗುತ್ತಿದೆ ಎಂದು ಲಿಖಿತವಾಗಿ ಉತ್ತರಿಸಿದರು ಆದರೆ ಇತ್ತೀಚಿಗಷ್ಟೇ ವಕೀಲರು ಹಾಗೂ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಇಂದಿನ ಸರ್ಕಾರದಲ್ಲಾಗುತ್ತಿರುವ ಆರ್ಥಿಕ ಮಾರ್ಗ ಪಲ್ಲಟದ ಅನುಮಾನದ ಕುರಿತು ರಾಜ್ಯ ಖಜಾನೆ ಇಲಾಖೆಯಲ್ಲಿ ಸ್ಪಷ್ಟೀಕರಣ ಪಡೆಯಲು ಪತ್ರ ಬರೆದಾಗ,2022-2023 ನೇ ಹಣಕಾಸಿನ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ FUND 2ರ ಅಡಿ ಖರ್ಚಾಗದೆ ಉಳಿಕೆ ಇರುವ 1494 ಕೋಟಿ ರೂ ಮೊತ್ತವು ಈ ಖಜಾನೆಯಲ್ಲಿ ಸ್ವೀಕೃತವಾಗಿರುವುದಿಲ್ಲ ಎಂದು ರಾಜ್ಯ ಖಜಾನೆ ಇಲಾಖೆಯು ಉತ್ತರಿಸಿದೆ.

ಬಳಕೆಯಾಗದ ಸಹಸ್ರಾರು ಕೋಟಿ ರೂಪಾಯಿಗಳನ್ನು ಸಂಚಿತ ನಿಧಿಗೆ ಸೇರಿಸಬೇಕಿತ್ತು.ಈ ರೀತಿ ಉಳಿಕೆಯಾದ ಅನುದಾನವು ರಾಜ್ಯದ ಸಂಚಿತ ನಿಧಿ ಭಾಗವಾಗಿರುತ್ತದೆ ಅದನ್ನು ಉಭಯ ಸದನಗಳ ಒಪ್ಪಿಗೆ ಪಡೆದು ಆರ್ಥಿಕ ವ್ಯವಹಾರ ನಡೆಸಬೇಕಾಗಿರುತ್ತದೆ, ಇದು ಸಾಂವಿಧಾನಿಕ ಪ್ರಕ್ರಿಯೆ ಆಗಿರುತ್ತದೆ ಇದನ್ನು ಹೊರತುಪಡಿಸಿ ಸರ್ಕಾರವು ಹಣವನ್ನು ಬಳಸಿಕೊಂಡಿದೆ ಎನ್ನಲಾದ ರೀತಿಯು ಸಂವಿಧಾನದ ಅಂಶಗಳಿಗೆ ವಿರುದ್ಧವಾಗಿ ಸರ್ಕಾರವು ನಡೆದುಕೊಂಡಿದೆ ಎಂಬರ್ಥವೇ ಸರಿ,
ಸಹಸ್ರಾರು ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಮನಬಂದಂತೆ ದಿಕ್ಕು ತಪ್ಪಿಸಿದೆಯೇ ಎಂಬ ಅನುಮಾನಗಳಿಗೆ ಉತ್ತರ ನೀಡುವವರಾರು ಎಂದು ವಿಧಾನ ಪರಿಷತ್ ಶಾಸಕ ಶ್ರೀ ಡಿ ಎಸ್ ಅರುಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ