ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಓಂಕಾರ ಅರಣ್ಯ ವಲಯದಲ್ಲಿ ದಿನೇ ದಿನೇ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಆಗಿದೆ ಎಂದು ರೈತ ಸಂಘ ಹಾಗೂ ರೈತ ಹಸಿರು ಸೇನೆಯ ರೈತರು ಇಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ಈ ವಿಚಾರವಾಗಿ ಫಾರೆಸ್ಟ್ ಆಫೀಸರ್ ಗಳಿಗೆ ಫೋನ್ ಕರೆ ಮಾಡಿದರೆ ಉಡಾಫೆ ಮಾತುಗಳನ್ನು ಆಡುತ್ತಾರೆ ಎಂದು ರೈತರು ತಿಳಿಸಿದ್ದಾರೆ.ಇದರಿಂದ ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಆದ ನಾಗಪ್ಪ (ವೀರಣಪುರ ). ತಾಲ್ಲೂಕು ಉಪಾಧ್ಯಕ್ಷರು ಆದ ಮಹೇಶ್ (ಉತ್ತಣಗೆರೆಹುಂಡಿ) ಹಾಗೂ ರೈತ ಸಂಘದ ಪದಾಧಿಕಾರಿಗಳು ಅರಣ್ಯ ಅಧಿಕಾರಿಗಳು ಮನವಿ ಸಲ್ಲಿಸಿದರು.
ವರದಿ ಗುಂಡ್ಲುಪೇಟೆ ಕುಮಾರ್