ದೇವನಹಳ್ಳಿ,ಯಲಿಯೂರು:ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದು ಅತ್ಯವತ್ಯವಾಗಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವ ಕಾಯಕ ನಮ್ಮಿಂದ ಆಗಬೇಕಿದೆ ಎಂದು ಸರ್ ಎಂ ವಿಶ್ವೇಶ್ವರಯ್ಯ ಆಂಗ್ಲ ಪ್ರೌಢಶಾಲೆ ಸಂಸ್ಥಾಪಕ ತ್ಯಾಗರಾಜು ಅಭಿಪ್ರಾಯಪಟ್ಟರು.
ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಮತ್ತು ವಿದ್ಯಾರ್ಥಿಳಿಂದ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಅಭಿಯಾನ ಆಯೋಜನೆ ಮಾಡಲಾಗಿತ್ತು.ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಪರಿಸರ ನಮ್ಮನ್ನು ರಕ್ಷಿಸುವುದಕ್ಕಿಂತ ನಾವು ಪರಿಸರವನ್ನು ರಕ್ಷಿಸುವ ಪರಿಸ್ಥಿತಿ ಎದುರಾಗಿದೆ.ಮನುಷ್ಯ ಅತಿ ಆಸೆಯಿಂದ ನಿಯಂತ್ರಣ ಇಲ್ಲದೆ ಮರ ಕಡಿದು ಅರಣ್ಯಗಳನ್ನು ನಾಶ ಮಾಡಿದ್ದಾನೆ.ಈ ಕಾರಣದಿಂದಾಗಿ ತಾಪಮಾನ ಹೆಚ್ಚಾಗಿ ಹವಾಮಾನದಲ್ಲಿ ವ್ಯತ್ಯಾಸಉಂಟಾಗುತ್ತಿದೆ. ಸಮಾಜದ ಪ್ರಜೆಗಳಾಗಿ ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ನಮ್ಮ ಕೊಡುಗೆಯ ಅವಶ್ಯಕತೆ ಇದೆ.
ಪ್ರತಿ ಪ್ರಜೆಯೂ ಒಂದೊಂದು ಸಸಿ ನೆಡುವ ಮೂಲಕ ವಾತಾವರಣದ ಸಮತೋಲನಕ್ಕೆ ಸಹಕರಿಸಬೇಕಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಕೆ ಹೆಚ್ ವೆಂಕಟೇಶ್ ಮಾತನಾಡಿ ನಾವು ಪರಿಸರಕ್ಕೆ ನೀಡಿದ್ದಕ್ಕಿಂತ ಅದರಿಂದ ನಾವು ಪಡೆದಿದ್ದೆ ಹೆಚ್ಚು.ಈಗಿನ ಪ್ರಸ್ತುತ ಪೀಳಿಗೆ ಸಸಿ ನೆಟ್ಟು ಪಾಲನೆ ಮಾಡುವ ಮೂಲಕ ಮಾಲಿನ್ಯ ಮುಕ್ತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ.ಕೇವಲ ಸಸಿ ನೆಟ್ಟರೆ ಸಾಲದು ಅದರ ಪಾಲನೆಯು ಬಹುಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳು ವಿಶೇಷವೇಶಭೂಷಣ ಧರಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಕೆನರಾ ಬ್ಯಾಂಕ್ ವ್ಯವಸ್ಥಾಪಕರು,ಬ್ಯಾಂಕ್ ಸಿಬ್ಬಂದಿ ವರ್ಗ ಹಾಗೂ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.