ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ ನೀಡಿದವರು ಅಪ್ಪ.
ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಜಗತ್ತಿಗೆ ನಮ್ಮನ್ನು ಪರಿಚಯಿಸಿದ ಹೃದಯವಂತ ಅಪ್ಪ.ನಮ್ಮಿಂದ ಏನೂ ನಿರೀಕ್ಷಿಸದೆ ನಮ್ಮ ನಿರೀಕ್ಷೆಗಳನ್ನ ನಿರಾಕರಿಸದೆ ನೆರವೇರಿಸಿದ ನಿಸ್ವಾರ್ಥ ಜೀವ ಅಪ್ಪ
ಬಯಸಿದ್ದೆಲ್ಲವನ್ನು ಬಯಸಿದಾಗ ಕೊಟ್ಟು ಮಕ್ಕಳ ಬದುಕಿನ ಸಾರಥಿಯಾದವರು ಅಪ್ಪ.
ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಬದುಕನ್ನ ಮುಡಿಪಾಗಿಟ್ಟು ನಮ್ಮನ್ನು ನೋಡಿ ಹೆಮ್ಮೆ ಪಡುವ ನಿಸ್ವಾರ್ಥ ಜೀವ ಅಪ್ಪ.
ನಾವು ಹುಟ್ಟಿದಾಗ ತನ್ನ ಬದುಕಿನ ಜವಬ್ದಾರಿಗೆ ಸಂತೋಷ ಪಟ್ಟು ಹೊಟ್ಟೆ ಕಟ್ಟಿ ದುಡಿದು ತಂದು ನಮ್ಮ ಆಸೆ ಪೂರೈಸಿದವರು ಅಪ್ಪ.
ಮಕ್ಕಳ ಯಶಸ್ಸಿನ ಹಿಂದಿನ ಶಕ್ತಿ ಅಪ್ಪ.
ಮಕ್ಕಳ ಬದುಕಿನ ನಾವಿಕನಾಗಿ ನಮ್ಮ ಹೆಗಲಿಗೆ ಹೆಗಲಾಗಿ ನಮಗಾಗಿ ಬದುಕಿದ ಅಕ್ಕರೆಯ ಅದ್ಭುತ, ಮೌನವಾಗಿ ತನ್ನವರಿಗಾಗಿ ಜೀವ ಸವೆಸುವ ಕರುಣಾಮಯಿ ಅಪ್ಪ.
ಅಪ್ಪ ಒಂದು ಪರಿಪೂರ್ಣತೆಯ ಅರ್ಥ.
ಅಪ್ಪ ಎಂದರೆ ಭರವಸೆ,ನಂಬಿಕೆ.
ನನ್ನ ಬದುಕಿನ ಪ್ರೇರಣೆ ನನ್ನ ಅಪ್ಪ.
ನಿಮ್ಮ ಪ್ರೀತಿ ಕಾಳಜಿಯ ಋಣವ ತೀರಿಸಲು ಸಾಧ್ಯವಿಲ್ಲ.
ನಮ್ಮಂತ ಹೆಣ್ಣುಮಕ್ಕಳ ಆನಂದದ ಅಕ್ಷಯಪಾತ್ರೆ ಅಪ್ಪ.
ಅನಂತ ಅನುರಾಗದ ಅಪ್ಪನಿಗೆ ಒಂದು ಕೃತಜ್ಞತೆ ಹೇಳುವ ಒಂದು ಅವಕಾಶ.
ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.
ಲೇಖಕಿ-ಶ್ರೀಮತಿ ಮಾನಸ ಜೀವನ್