ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು
ಹೊರಳವಾಡಿ ಗ್ರಾಮದ ಪಕ್ಕ ಹಾದುಹೋಗಿರುವ ಹುಲ್ಲಹಳ್ಳಿ ಚಾನಲ್ ಏರಿಯಾ ಗೇಟ್ ಹಾಳಾಗಿ ಹೋಗಿದ್ದು ಹಾಗೂ ಪೈಪ್ ಹೊಡೆದು ಹೋಗಿ ದಾರಿ ಹಳ್ಳ ಹಿಡಿದಿರುತ್ತದೆ ಆದ್ದರಿಂದ ಇದನ್ನು ಗಮನಹರಿಸಿ ಎಚ್ಚೆತ್ತು ಅಧಿಕಾರಿಗಳು ದುರಸ್ತಿ ಮಾಡಿಸಬೇಕು ಎಂದು ಈಗಾಗಲೇ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರಿಗೆ ಮನವಿ ನೀಡಲಾಗಿದೆ.
ಕಾವೇರಿ ನೀರಾವರಿ ನಿಗಮ (ನಿ.) ನಂ 4 ನುಗು ಉಪ ವಿಭಾಗ ನಂಜನಗೂಡು ತಾಲೂಕು ಮೈಸೂರು ಜಿಲ್ಲೆ,ವ್ಯಾಪ್ತಿಗೆ ಬರುವ ಹೊರಳವಾಡಿ ಗ್ರಾಮದ ಪಕ್ಕ ಹಾದು ಹೋಗಿರುವ ಹುಲ್ಲಹಳ್ಳಿ ಚಾನೆಲ್ ಏರಿಯ ಗೇಟ್ ಹಾಳಾಗಿ ಹೋಗಿದ್ದು ಹಾಗೂ ಪೈಪ್ ಒಡೆದುಹೋಗಿ ದಾರಿ ಹಳ್ಳ ಹಿಡಿದಿರುತ್ತದೆ ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಅಷ್ಟೇ ಇದೆ ಹಳ್ಳಕ್ಕೆ ದನ-ಕರು ಹಾಗೂ ಒಬ್ಬ ರೈತ ಬಿದ್ದು ಅನಾಹುತ ಸಂಭವಿಸುತ್ತದೆ ಹಾಗೂ ಜಮೀನಿಗೆ ಹೋಗುವ ರೈತರ ಪರಿಸ್ಥಿತಿ ಅಸ್ತವ್ಯಸ್ತವಾಗಿದ್ದು ಜೀವದ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ ಇದರ ಜೊತೆಯಲ್ಲೇ ಮುಂಬರುವ ದಿನಗಳಲ್ಲಿ ಚಾನೆಲ್ ಗೆ ನೀರು ಬಿಟ್ಟಿದ್ದೆಯಲ್ಲಿ ನೂರಾರು ಎಕರೆ ಬಯಲು ಪ್ರದೇಶ ಹಾಳಾಗಿ ತೊಂದರೆ ಆಗುವ ಸಂಭವ ಹೆಚ್ಚಿರುತ್ತದೆ ಈಗಾಗಲೇ ರೈತರು ಬರಗಾಲವನ್ನು ಅನುಭವಿಸಿ ಬೆಳೆ ಇಲ್ಲದೆ ಕಂಗೆಟ್ಟಿದ್ದು ರೈತರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿರುತ್ತದೆ.ಅದರಲ್ಲಿ ಈ ತರಹದ ಒಂದಷ್ಟು ಸಮಸ್ಯೆಗಳು ಎದುರಾದಾಗ ರೈತರು ತಲೆದೂಗಬೇಕಾಗಿದೆ ಹಾಗೆ ಇದರಿಂದ ರೈತರಿಗೆ ಗ್ರಾಮಸ್ಥರಿಗೆ ಯಾವುದಾದರೂ ತೊಂದರೆ ಸಂಭವಿಸಿದ್ದಲ್ಲಿ ನೇರವಾಗಿ ಇಲಾಖೆ ಮತ್ತು ಅಧಿಕಾರಿ ವರ್ಗ ಹೊಣೆಯಾಗಿರುತ್ತದೆ ಆದ್ದರಿಂದ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣದಲ್ಲಿಯೇ ಎಚ್ಚೆತ್ತುಕೊಂಡು ಸ್ಥಳ ಪರಿಶೀಲನೆ ಮಾಡಿ ಶೀಘ್ರದಲ್ಲೇ ಕ್ರಮ ವಹಿಸಬೇಕು ಹೊರಳವಾಡಿ ಗ್ರಾಮದ ರೈತರುಗಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್