ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಸರ್ವ ಧರ್ಮ ಸಭೆಯನ್ನು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿ ಮಾತನಾಡಿ ನಾವು ಎಷ್ಟೇ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದರು ಕೂಡಾ ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಶ್ರೀರಾಮನು ಕಾಡಿನಲ್ಲಿ ಇದ್ದರೂ ಕೆಡಲಿಲ್ಲ,ರಾವಣ ಅರಮನೆಯಲ್ಲಿ ಇದ್ದರೂ ಒಳ್ಳೆಯವನಾಗಿರಲಿಲ್ಲ, ಕೈಕೇಯಿ ಆದರ್ಶ ಪುರುಷ ಶ್ರೀರಾಮನ ಚಿಕ್ಕಮ್ಮನಾಗಿದ್ದರೂ ಕೂಡಾ ಒಳ್ಳೆಯ ಗುಣ ಹೊಂದಿರಲಿಲ್ಲ,ವಿಭೀಷಣ ದುಷ್ಟ ರಾವಣನ ಸಹೋದರನಾಗಿದ್ದರೂ ಕೂಡಾ ಅವನ ಗುಣದಲ್ಲಿ ಯಾವುದೇ ದೋಷಗಳಿರಲಿಲ್ಲ ಇದು ಸಮಾಜದಲ್ಲಿರುವ ಜನರ ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ.ಹೀಗಾಗಿ ಜಾತ್ರೆಗಳು,ಹಬ್ಬ, ಹರಿದಿನಗಳು ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಬದುಕಿನಲ್ಲಿ ಒಳ್ಳೆಯ ಪರಿಣಾಮಕಾರಿ ಬದಲಾವಣೆ ತರಲಿಕ್ಕೆ ಸಾಧ್ಯವಾಗಲಿದೆ ಎಂದು ಜಾತ್ರಾ ಸಂಘಟಕರನ್ನು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರಘೇಂದ್ರ ಮಹಾಸ್ವಾಮಿಗಳು, ಹರ್ಲಾಪೂರ ಡವಳೇಶ್ವರ ಮಠದ ಶ್ರೀ ರೇಣುಕ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಕಟಕೋಳದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಈರಣ್ಣ ಗಡೆಣ್ಣವರ,ಪರುತಗೌಡ ಪಾಟೀಲ,ಮಾರುತಿ ಕೊಪ್ಪದ,ಮಹಾದೇವ ಚಿನ್ನಾಕಟ್ಟಿ,ವಿಠ್ಠಲ ಗಡೆಣ್ಣವರ, ಮುತ್ತನಗೌಡ ಪಾಟೀಲ,ಗುರುನಾಥ ಸಿಂಗಾರಕೊಪ್ಪ, ವಿಠ್ಠಲ ಪಾಟೀಲ,ಡಾ.ಹಣಮಂತಪ್ಪ ಮಳಲಿ,ಸಿ.ಬಿ. ಪಾಟೀಲ,ಯಲ್ಲಪ್ಪ ಗಣೆಲ್ದ,ಸೋಮಶೇಖರ ಮಗದುಮ್ಮ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಕರಿಯಪ್ಪ ಮಾ ಮಾದರ