ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊಪ್ಪಲು (ಕೆರೆಕೊಪ್ಪ) ಗ್ರಾಮದಲ್ಲಿ ಭಾರತಿ ಸಂಪದ ವಡ್ಡಿನಗದ್ದೆ, ಪರಿಸರ ಜಾಗೃತಿ ಟ್ರಸ್ಟ್ ಸೊರಬ,ದೊಡ್ಡಮನೆ ರಾಮಪ್ಪ ಸೇವಾ ಟ್ರಸ್ಟ್,ವಿನಾಯಕ ಮೋಟರ್ಸ್ ಕೋಟೇಶ್ವರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಔಷಧೀಯ ಗಿಡ ಮರ ಹುಲ್ಲುಗಳಿಗೆ ಹಾಗೂ ಕಾಡುಜಾತಿಯ ಗಿಡಮರಗಳಿಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮತ್ತು ರಕ್ತಚಂದನವನ ನಿರ್ಮಾಣ ಕಾರ್ಯಕ್ರಮ ಶನಿವಾರ ನಡೆಯಿತು.
ಸಾನಿಧ್ಯ ವಹಿಸಿದ್ದ ಶಿರಳಗಿ ಚೈತನ್ಯರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ ಮಾನವ ತನ್ನ ಜೀವನದಲ್ಲಿ ಪರಿಸರ ಒಂದು ಜೀವದ ಅವಿಭಾಜ್ಯ ಅಂಗ ಎಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೆ ಮನುಕುಲಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ಗಿಡ-ಮರಗಳನ್ನು ಬೆಳೆಸುವ ಹವ್ಯಾಸ ಬೆಳಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ರೂಪಿಸಿಕೊಡಬೇಕು ಆದರೆ ಯುವಕರು ನಾಡಿಗೆ ಉಸಿರಾದ ಸಾಲು ಮರದ ತಿಮ್ಮಕ್ಕನಂತವರನ್ನು ಆದರ್ಶವನ್ನು ಬೆಳೆಸಿಕೊಳ್ಳದೇ ಸೆಲೆಬ್ರೆಟಿಗಳು ಮತ್ತು ಕ್ರೌರ್ಯತೆಯಿಂದ ಮೆರೆಯುವವರನ್ನು ಆರಾಧಿಸುತ್ತಾ ಆದರ್ಶವಾಗಿಟ್ಟುಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ ಪಶ್ಚಿಮ ಘಟ್ಟಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಸಂಪತ್ತನ್ನು ಉಳಿಸಲು ಮುಂದಾಗಬೇಕು ಎಂದರು.
ಕಾಂತಾರಯಜ್ಞ ಮುಖ್ಯಸ್ಥ ಮಂಜುನಾಥ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ವಕೀಲ ಎಂ.ಆರ್.ಪಾಟೀಲ್,ಉಪ ವಲಯ ಅರಣ್ಯಧಿಕಾರಿ ಮೋಹನ್,ಪಿಡಿಒ ಸೀಮಾ,ಎಂ.ಆರ್ ಪಾಟೀಲ್,ಶ್ರೀಧರ ಸೀತಾರಾಮ ಹೆಗಡೆ,ವಿಜಯಲಕ್ಷ್ಮಿ, ವಿನಾಯಕರಾವ್ ಬೇಳೂರು,ಪ್ರಶಾಂತ್ ದೊಡ್ಡಮನೆ, ಶ್ರೀಪಾದ್ ಬಿಚ್ಚುಗತ್ತಿ,ಮಂಜುನಾಥ್ ಹೆಗಡೆ, ಅಶೋಕ್,ಶ್ರೀಧರ್ ಭಟ್ ಕೊಳಗಿ,ಗಜಾನನ ರೇವಣಕಟ್ಟಾ ಮತ್ತಿತರರಿದ್ದರು.
ಅರಣ್ಯ ವೀಕ್ಷಕ ಸುರೇಶ ಲಕ್ಷ್ಮಣನಾಯ್ಕ,ಜೇನು ಕೃಷಿತಜ್ಞ ವಿಘ್ನೇಶ ತಲಕಾಲಕೊಪ್ಪ,ನಾಟಿ ವೈದ್ಯರಾದ ಕೆ.ಟಿ. ಗೌಡರ್,ಕೃಷ್ಣಪ್ಪ ಬೇಳೂರು,ಪತ್ರಕರ್ತರಾದ ಸಂದೀಪ ಯು.ಎಲ್,ರಾಘವೇಂದ್ರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.
ವರದಿ-ಸಂದೀಪ ಯು.ಎಲ್ ಸೊರಬ