ರಾಮದುರ್ಗ:ದೈಹಿಕ ಶಿಕ್ಷಕರ ಬೇಡಿಕೆಗಳು ಜುಲೈ ೨೦೨೪ ರ ಅಂತ್ಯದ ಒಳಗೆ ಈಡೇರದೆ ಇದ್ದಲ್ಲಿ ಪ್ರಸ್ತುತ ವರ್ಷದ ಇಲಾಖಾ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಾಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಆದ್ದರಿಂದ ಸರಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೈಹಿಕ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ವೃಂದ ಮತ್ತು ನೇಮಕಾತಿಯನ್ನು ತಕ್ಷಣ ಈಡೇರಿಸಲು, ಮುಖ್ಯ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಕರಿಗೆ ನಿಡುವುದು,ದೈಹಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಇಲ್ಲದೇ ಇದ್ದ ಸಂದರ್ಭದಲ್ಲಿ ಅತಿಥಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಮಾಡುವುದು,ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೨ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಂಯೋಜಕರು/ಸಹಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರು ಹುದ್ದೆ ಸೃಜಿಸಿ ಮುಂಬಡ್ತಿ ನೀಡುವುದು,ಎಸ್.ಎ.ಟಿ.ಎಸ್ ನಲ್ಲಿ ದೈಹಿಕ ಶಿಕ್ಷಣವನ್ನು ಭಾಗ ಎ ದಲ್ಲಿ ಸೇರ್ಪಡೆ ಮಾಡುವುದು,ದೈಹಿಕ ಶಿಕ್ಷಣ ಶಿಕ್ಷಕರಿಗೆ ಉನ್ನತ ವ್ಯಾಸಂಗ ಮಾಡಲು ವೇತನ ಸಹಿತ ಅನುಮತಿ ನೀಡುವುದು,ದೈಹಿಕ ಶಿಕ್ಷಣ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾ ಘಟಕದ ನೇತೃತ್ವದಲ್ಲಿ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಿ.ಡಿ.ಕಾಲವಾಡ,ತಾಲೂಕಾಧ್ಯಕ್ಷ ಎನ್.ಜಿ.ಭಜಂತ್ರಿ, ಖಜಾಂಚಿ ಎಸ್.ಎಸ್.ಪಾಟೀಲ,ಎಸ್.ಎಚ್. ಬಂಡಿವಡ್ಡರ,ಪಿ.ಬಿ.ಲಮಾಣಿ,ಎಸ್.ಐ.ಸತ್ತಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ:ಕರಿಯಪ್ಪ ಮಾ ಮಾದರ