ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹೆಚ್.ಸಿ.ಶ್ರೀಧರಮೂರ್ತಿ ಅವರ ಸೇವೆಗೆ ಸಂದ ಗೌರವ:ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ 

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಗೃಹರಕ್ಷಕದಳ ಘಟಕದ ಸಿ.ಕ್ಯೂ.ಎಮ್.ಎಸ್ ಹೆಚ್.ಸಿ.ಶ್ರೀಧರಮೂರ್ತಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ. 

ಹೆಚ್.ಸಿ.ಶ್ರೀಧರಮೂರ್ತಿ ಸಿ.ಕ್ಯೂ.ಎಮ್.ಎಸ್ ಗೃಹರಕ್ಷಕದಳ,ಶಿವಮೊಗ್ಗ ಘಟಕ ಇವರು 

ದಿನಾಂಕ: 01-01-1996 ರಲ್ಲಿ ಸ್ವಯಂ ಸೇವಕರಾಗಿ ಗೃಹರಕ್ಷಕದಳಕ್ಕೆ ಸೇರಿ,ಪ್ರಸ್ತುತ ಸಿ.ಕ್ಯೂ‌.ಎಮ್.ಎಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಾನೂನು ಸುವ್ಯವಸ್ಥೆ ಚುನಾವಣೆ,ಜಾತ್ರೆ ಹಾಗೂ ಸೇರಿದಂತೆ ಎಲ್ಲಾ ವಿಧವಾದ ಕರ್ತವ್ಯಗಳಲ್ಲಿ ಅತೀ ಹೆಚ್ಚು ಗೃಹರಕ್ಷಕರನ್ನು ಕ್ರೂಢೀಕರಿಸಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸಿ,ಜಿಲ್ಲಾಡಳಿತ,ಜಿಲ್ಲಾ ಪೊಲೀಸ್,ವಾರ್ತಾ ಇಲಾಖೆ,ರೆಡ್‌ ಕ್ರಾಸ್ ಹಾಗೂ ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಗೃಹರಕ್ಷಕ ತಂಡದೊಂದಿಗೆ ನಿರ್ವಹಿಸಿರುತ್ತಾರೆ.

ಗೃಹರಕಕ್ಷರನ್ನು ಹುರಿದುಂಬಿಸಿ ಕರ್ತವ್ಯ ಹಾಗೂ ಕವಾಯತುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸದಾ ಕಾರ್ಯ ಪ್ರವೃತ್ತರಾಗಿದ್ದು,ರೋಟರಿ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ,ರಕ್ತದಾನ ಶಿಬಿರವನ್ನು ಯಶಸ್ವಿಯಾಗುವಂತೆ ಕಾರ್ಯನಿರ್ವಹಿಸಿದ್ದಾರೆ.

ಗೃಹ ರಕ್ಷಕ ದಳ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು “ರೂಟ್ ಮಾರ್ಚ್” ಏರ್ಪಡಿಸಿರುತ್ತಾರೆ.ಜಿಲ್ಲಾ ಸಮಾದೇಷ್ಟರು ಮತ್ತು ಗೃಹರಕ್ಷಕರು ಹಾಗೂ ಅಧಿಕಾರಿಗಳ ಸಹಯೋಗದೊಂದಿಗೆ ವಿಶ್ವಯೋಗ ದಿನಾಚರಣೆ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಏರ್ಪಡಿಸಿರುತ್ತಾರೆ.

2001 ರಿಂದ ಸತತವಾಗಿ ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದ “ಗೃಹರಕ್ಷಕರ ವೃತ್ತಿಪರ ಹಾಗೂ ಕ್ರೀಡಾಕೂಟ”ದಲ್ಲಿ ಭಾಗವಹಿಸಿ “ಸಮಗ್ರ ಪ್ರಶಸ್ತಿ” ಪಡೆಯಲು ಶ್ರಮಿಸಿರುತ್ತಾರೆ. 

ಹೆಚ್ ಸಿ ಶ್ರೀಧರಮೂರ್ತಿ ಅವರ ಸೇವೆಯನ್ನು ಪರಿಗಣಿಸಿ ಸಮಾಜದ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ವಿಶ್ವ ಕನಕ ಪತಂಜಲಿರವರು “ಕನಕ ರತ್ನ ಪ್ರಶಸ್ತಿ” ಹಾಗೂ ಕಾರ್ಮಿಕ ಮತ್ತು ಕೃಷಿ ಇಲಾಖೆಯವರು ರಾಜ್ಯ ಪ್ರಶಸ್ತಿ, “ಜಿಲ್ಲೆಯ ಅತ್ಯುತ್ತಮ ಗೃಹರಕ್ಷಕ ಪ್ರಶಸ್ತಿ” ಹಾಗೂ ಶ್ರೀ ವಿನಾಯಕ ಸ್ವಾಮಿ ಕಲ್ಯಾಣ ಸಮಿತಿ ರವರು “ಉತ್ತಮ ಸಮಾಜ ಸೇವಕ ಪ್ರಶಸ್ತಿ” ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಹಾಗೂ ರೆಡ್ ಕ್ರಾಸ್ ಸಂಸ್ಥೆಯವರು “ಉತ್ತಮ ನಡತೆ ಪ್ರಶಸ್ತಿ” ನೀಡಿ ಗೌರವಿಸಿರುತ್ತಾರೆ.

ಹೆಚ್.ಸಿ.ಶ್ರೀಧರಮೂರ್ತಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು 2023 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.ಜೂನ್ 11 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹಸಚಿವ ಜಿ ಪರಮೇಶ್ವರ್ ಅವರು ಶ್ರೀಧರಮೂರ್ತಿ ಅವರಿಗೆ ಚಿನ್ನದ ಪದಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ವರದಿ:ಕೆ ಆರ್ ಶಂಕರ್,ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ