ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ದಾನಿಗಳಾದ ಚೆನ್ನಯ್ಯ ರವರಿಂದ ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 27 ಮಕ್ಕಳಿಗೆ ಬರೆಯುವ ಪುಸ್ತಕಗಳು,ಪರಿಕರ ವಿತರಣೆ ಮಾಡಲಾಯಿತು.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂದಿಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 27 ಮಕ್ಕಳಿಗೆ ಪುಸ್ತಕಗಳನ್ನು ಸುಂದರವಾದ ಸಮಾರಂಭದಲ್ಲಿ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಡಾ.ಸಂಪತ್,ಕೆಂಪೇಗೌಡ ಹಾಸ್ಪಿಟಲ್ ಬೆಂಗಳೂರು ಇವರು ಮಕ್ಕಳಿಗೆ ಆರೋಗ್ಯದ ವಿಚಾರವಾಗಿ ಹಿತವಚನ ನುಡಿದರು ಮಕ್ಕಳು ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಕ್ಕಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ತಿಳಿಸಿದರು ಹಾಗೂ ಪುಸ್ತಕ ದಾನಿಗಳು ಚೆನ್ನಯ್ಯ ಇವರು ಎಲ್ಐಸಿ ವ್ಯವಸ್ಥಾಪಕರು ಅವರು ಮಾತನಾಡಿ ನಾನು ಇದೇ ಶಾಲೆಯಲ್ಲಿ 50 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿರುತ್ತೇನೆ ಹಾಗಾಗಿ ಇದೇ ಶಾಲಾ ಮಕ್ಕಳಿಗೆ ನಮ್ಮ ಕಡೆಯಿಂದ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ನುಡಿದರು ಹಾಗೂ ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುಸ್ತಕ ದಾನಿಗಳಾದ ಚೆನ್ನಯ್ಯರವರಿಗೆ ಶಾಲಾವತಿಯಿಂದ ಹಾಗೂ ಕರ್ನಾಟಕ ರಕ್ಷಣಾ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ಕೊಡಲಾಯಿತು ಹಾಗೂ ಡಾಕ್ಟರ್ ಸಂಪತ್ತು ಕೆಂಪೇಗೌಡ ಹಾಸ್ಪಿಟಲ್ ಬೆಂಗಳೂರು ಇವರನ್ನು ಸಹ ಸನ್ಮಾನಿಸಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಫ್ರಾನ್ಸಿಸ್ ಡಿಸೋಜರವರು ರವರು ಹಾಗೂ ಬರೆಯುವ ಪುಸ್ತಕ ಹಾಗೂ ಪರಿಕರಗಳನ್ನು ವಿತರಣೆ ಮಾಡಿದ ದಾನಿಗಳಾದ ಚೆನ್ನಯ್ಯನವರು ಎಲ್ಐಸಿ ವ್ಯವಸ್ಥಾಪಕರು ಹಾಗೂ ಡಾ ಸಂಪತ್ ರವರು ಕೆಂಪೇಗೌಡ ಹಾಸ್ಪಿಟಲ್,ಬೆಂಗಳೂರು ಹಾಗೂ ಗಣಪತಿ ರವರು ನಂದಿಗುಂದ ಶಾಲೆಯ ಹೆಡ್ ಮಾಸ್ಟರ್ ಹಾಗೂ ಶಾಲಾ ಸಿಬ್ಬಂದಿಗಳು ಹಾಗೂ ಅಂಗನವಾಡಿ ಟೀಚರ್ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.