ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಹಜರತ್ ಕೊಂದಮಿರುದ್ದಿನ ಜಾತ್ರಾ ನಿಮಿತ್ಯವಾಗಿ ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಸೂಕ್ತವಾದ ರಸ್ತೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವಂತೆ ಆಗ್ರಹಿಸಿ ತಾಲೂಕ ದಂಡಾಧಿಕಾರಿಗಳಿಗೆ ಮೊಹಮ್ಮದ್ ಶೋಯಬ್ ಗಿರಣಿ ಅವರಿಂದ ಮನವಿ ಸಲ್ಲಿಸಲಾಯಿತು.
ಜೇವರ್ಗಿ ತಾಲೂಕಿನ ಹಜರತ್ ಕೊಂದಮಿರುದ್ದಿನ ಜಾತ್ರೆಯು ದಿನಾಂಕ21/6/2024 ರಿಂದ23/6/2024 ರವರಿಗೆ ಮೂರು ದಿನದ ಜಾತ್ರಾ ಉತ್ಸವವು ಅತೀ ಅದ್ದೂರಿಯಾಗಿ ನಡೆಯುತ್ತಿದ್ದು ಪರ ರಾಜ್ಯಗಳಿಂದ ಪರಸ್ಥಳಗಳಿಂದ ಅತಿಹೆಚ್ಚಿನ ಜನಸಂಖ್ಯೆ ಬರುತ್ತಿರುವ ಕಾರಣ ತಾಲೂಕಿನ ದಂಡಾಧಿಕಾರಿಗಳು ತಾಲೂಕಿನ ಮಹಾಲಕ್ಷ್ಮಿ ದೇವಸ್ಥಾನದಿಂದ ಹಜರತ್ ಕೊಂದಮಿರುದ್ದೀನ್ ದರ್ಗಾದವರಿಗೆ ಸೂಕ್ತವಾದ ರಸ್ತೆ ನಿರ್ಮಾಣ ಹಾಗೂ ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು ಹಾಗೂ ಸಾರ್ವಜನಿಕರಿಗೆ ಯಾತ್ರಿ ನಿವಾಸ ನಿರ್ಮಾಣ ಮತ್ತು ಕುಡಿಯುವ ನೀರಿನ ಸೌಲಭ್ಯ ಮತ್ತು ಶೌಚಾಲಯದ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಲ್ಬುರ್ಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ಶೋಯಬ್ ಗಿರಣಿ ಅವರು ಮನವಿ ಪತ್ರ ಸಲ್ಲಿಸಿದೆವೆಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.