ಶಿವಮೊಗ್ಗ:ಕಳೆದ ಶನಿವಾರ ನಡೆದ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯಿ ಗ್ರಾಹಕರು ಭೇಟಿ ನೀಡಿದ್ದು ಜೊತೆಗೆ ಸಾಗರವಲ್ಲದೇ ಬೇರೆ ಊರುಗಳಿಂದಲೂ ಅನೇಕರು ಆಗಮಿಸಿದ್ದು ಅಷ್ಟೇ ಅಲ್ಲದೇ ಮಧ್ಯಾಹ್ನ ಮೂರೂವರೆಯಿಂದ ರಾತ್ರಿ ಎಂಟೂವರೆಯವರೆಗೆ ಐದು ತಾಸುಗಳ ಕಾಲ ನಾವು ನಡೆಸಿದ ಸಂತೆಯಲ್ಲಿ ಒಟ್ಟೂ ಒಂದು ಲಕ್ಷದ ಹತ್ತು ಸಾವಿರದ ರೂ.ವಹಿವಾಟು ನಡೆದಿದೆ ಎನ್ನಲು ನಿಜಕ್ಕೂ ಹೆಮ್ಮೆಯಾಗುತ್ತದೆ.
ಇದರ ಹಿಂದಿನ ಶಕ್ತಿ ಜೀವನ್ಮುಖಿಯ ಕಾರ್ಯಕಾರಿ ಸಮಿತಿಯ ಶ್ರಮ ಮತ್ತು ಚರಕ ಹಾಗು ಜೀವನ್ಮುಖಿ ಸದಸ್ಯರ ಬೆಂಬಲ,ಸ್ಟಾಲ್ ಹಾಕಿದವರ ಕಠಿಣ ಶ್ರಮ ಸಂತೆಗೆ ಭಾಗವಹಿಸಿದ ಅನೇಕರು ಅಭಿಪ್ರಾಯ ಸೂಚಿಸಿದ್ದಾರೆ..ತಿಂಡಿ ತಿನಿಸುಗಳ ಪ್ರಶಂಸಿದ್ದಾರೆ..ಕರಕುಶಲ ವಸ್ತುಗಳ ಕೊಂಡು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಯೋಜನೆಯನ್ನು ಮೆಚ್ಚಿದ್ದಾರೆ ಕೆಲವು ಸೂಚನೆ ಸಲಹೆಗಳನ್ನೂ ಕೊಟ್ಟಿದ್ದಾರೆ.
ಅವುಗಳೆಲ್ಲವನ್ನೂ ಸ್ವಾಗತಿಸುತ್ತಾ ಮುನ್ನಡೆಯಬೇಕಿದೆ.
ಅವ್ವ ಸಂತೆಯ ಸುದ್ದಿಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ನಮ್ಮ ಮಾಧ್ಯಮಗಳ ಪಾತ್ರ ಹಿರಿದು ಹಾಗಾಗಿ ಶಿವಮೊಗ್ಗ ಹಾಗೂ ಸಾಗರದ ಮಾಧ್ಯಮಮಿತ್ರರಿಗೂ ಹಾಗೂ ಸಾಗರದ ಬಹುತೇಕರಿಗೆ ತಲುಪುವ ಸಾಮಾಜಿಕ ಜಾಲತಾಣದ ಪೇಜ್ I love ನಮ್ಮ ಸಾಗರದ ಅಡ್ಮಿನ್ ಅಂಜನ್ ಕಾಯ್ಕಿಣಿಯವರಿಗೂ.
ಚಂದದ ಪೋಸ್ಟರ್ ಡಿಸೈನ್ ಮಾಡಿಕೊಟ್ಟ ಮೈಸೂರಿನ ಚಲುವರಾಜ್ಎಚ್ ಆರ್ ರವರಿಗೂ,
ಬ್ಯಾನರ್ ಬರೆದು ಪ್ರೀತಿಯಿಂದ ತಂದು ಚರಕ ಅಂಗಡಿಗೆ ಮುಟ್ಟಿಸುವ ಮಧು ಅವರಿಗೂ , ನಿರಂತರವಾಗಿ ವಾರಗಟ್ಟಲೇ ಶ್ರಮವಹಿಸಿದ ಆಹಾರ ಹಾಗೂ ಕರಕುಶಲ ಮಳಿಗೆಯನ್ನು ತೆರೆದ ಜೀವನ್ಮುಖಿ ಸದಸ್ಯೆಯರಿಗೂ…ಬಂದು ನೋಡಿದ, ಕೊಂಡುಕೊಂಡ,ಮೆಚ್ಚಿದ ಎಲ್ಲ ಗ್ರಾಹಕ ಬಂಧುಗಳಿಗೂ ನಾಡಿನ ಯಾವುದೋ ಭಾಗದಿಂದ ನಮ್ಮ ಚಟುವಟಿಕೆ ನೋಡಿ ಹರಸಿದ ನಗುವ ಮನಸುಗಳಿಗೆಲ್ಲರಿಗೂ…..
ಸಂಭ್ರಮದಿಂದ ತಮ್ಮ ಮನೆಯ ಹಬ್ಬದಂತೆ ಸ್ನೇಹಿತರನ್ನು ಆಹ್ವಾನಿಸಿದ ಜೀವನ್ಮುಖಿ ಹಾಗು ಚರಕದ ಎಲ್ಲ ಮನಸುಗಳಿಗೂ ಪ್ರೀತಿಯ ವಂದನೆ.
ಎಲ್ಲರ ಹಾರೈಕೆಯೇ ಮುಂದಿನ ನಡೆಗೆ ಬೆಂಬಲ ವೆಂದು ನಂಬಿರುವೆ ಎಂದು
ಎಂ ವಿ ಪ್ರತಿಭಾ ಅವರು
ಕಾರ್ಯಕಾರಿ ಸಮಿತಿ ಜೀವನ್ಮುಖಿ
ಹಾಗೂ ಚರಕದ ಪರವಾಗಿ ಕೃತಜ್ಞತೆ ಪ್ರಕಟಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್