ಬೀದರ್:ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ಬೀದರ್ ನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾದ್ಯಮ ಸಹಯೋಗದಲ್ಲಿ ಶುಕ್ರವಾರ ಯೋಗ ಕಾರ್ಯಕ್ರಮ ಆಯೋಜಿಸಿದರು.
ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ, ರೋಗಗಳನ್ನು ದೂರ ಇರಿಸುತ್ತದೆ. ರಕ್ತದೊತ್ತಡ,ಮಧುಮೇಹ,ಹೃದಯ ಸಂಬಂಧಿ ರೋಗಗಳ ಸಾಧ್ಯತೆಗಳನ್ನು ತಗ್ಗಿಸುತ್ತದೆ, ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆರೋಗ್ಯವೇ ಭಾಗ್ಯ ,ಆರೋಗ್ಯ ಇಲ್ಲದಿದ್ದರೆ ದುಡ್ಡು,ಅಧಿಕಾರ,ಅಂತಸ್ತು ಯಾವುದು ಉಪಯೋಗಕ್ಕೆ ಬರೋದಿಲ್ಲ. ಉತ್ತಮ ಆರೋಗ್ಯ ಕಾಪಾಡಲು ನಿತ್ಯ ಪದ್ಮಾಸನಾ, ಕಪಾಲಭಾತಿ , ಪ್ರಾಣಾಯಾಮ,ಸೂರ್ಯ ನಮಸ್ಕಾರ ಪ್ರತಿಯೊಬ್ಬರೂ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಯೋಗಾಸನಗಳು ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕ ಶ್ರೀ.ಯೋಗೇಂದ್ರ ಯದ್ಲಾಪುರೆ ರವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ
ಸುಮಾರು 450ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಕೆ.ಆರ್.ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ್ ಜಾಬ್ ಶೆಟ್ಟಿ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಬಿ.ಜಿ.ಶೆಟ್ಕರ್, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಮ್ ಪಾರ,
ಜಂಟಿ ಕಾರ್ಯದರ್ಶಿಗಳಾದ ಶ್ರೀ ಸತೀಶ್ ಪಾಟೀಲ್, ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ್ ಹಂಗರಗಿ,
ಪ್ರೋ.ಅನಿಲ್ ಕುಮಾರ್ ಸಿ,
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಮಾದಯ್ಯ ಸ್ವಾಮಿ, ಯೋಗ ತರಬೇತುದಾರರಾದ ಶ್ರೀ ಶಿವಕುಮಾರ್ ರೆಡ್ಡಿ, ಹಾಗೂ ಶ್ರೀ.ಯೋಗೇಂದ್ರ ಯದ್ಲಾಪುರೆ
ಹಾಗೂ ಆಡಳಿತ ಮಂಡಳಿಯವರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ:ರೋಹನ್ ವಾಘಮಾರೆ