ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಾದ್ಯಂತ ಬರುವ ಕಾಲುವೆಗಳನ್ನು ನರೇಗಾ ಯೋಜನೆಯಡಿಯಲ್ಲಿ ಸಂಪೂರ್ಣವಾಗಿ ಸ್ವಚ್ಛತೆ ಮಾಡಬೇಕು ಎಂದು ಶಾಸಕ ಎಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಉಡೊತೊರೆ ಜಲಾಶಯಕ್ಕೆ ಭೇಟಿ ನೀಡಿದ ಶಾಸಕರು ಜಲಾಶಯದ ಅಭಿವೃದ್ಧಿ ಕಾಲುವೆಗಳ ಮಾಹಿತಿ ಪಡೆದರು.
ಮಳೆ ಬಂದಾಗ ಜಲಾಶಯದಲ್ಲಿ ನೀರು ಶೇಖರಣೆಯಾಗುವಂತೆ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ನೀರನ್ನು ಹರಿಬಿಟ್ಟಾಗ ಜಮೀನುಗಳಿಗೆ ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಹೇಳಿದರು.
ಇದೇ ಸಮಯದಲ್ಲಿ
ಭೂ ಪರಿಹಾರ ನೀಡುವಂತೆ ಶಾಸಕರಿಗೆ ರೈತರು ಮನವಿಯನ್ನು ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂಬಂಧಪಟ್ಟ ಕಬಿನಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಅಜ್ಜೀಪುರ ಭಾಗದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿ ಹರಿಯುವ ಸಂದರ್ಭದಲ್ಲಿ ರಸ್ತೆ ಮೇಲೆ ನೀರು ಹರಿಯುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುವುದರಿಂದ ರಸ್ತೆಯನ್ನು ಎತ್ತರ ಮಾಡುವಂತೆ ತಿಳಿಸಿದರು.
ಕಾಂಚಳ್ಳಿ ರಸ್ತೆಗೆ ನೀರಾವರಿ ಇಲಾಖೆಗೆ ಸೇರಿದ ರಸ್ತೆಯನ್ನು ಸರಿಪಡಿಸಿ ಕಾಂಚಳ್ಳಿಯಿಂದ ಕಾಲುವೆಗಳು ದುರಸ್ತಿ ಆಗಿದ್ದು ಅದಕ್ಕೆ ತಡೆಗೋಡೆ ಪೈಪ್ ಲೈನ್ ಅಳವಡಿಸಿ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಕಾರ್ಯಪಾಲಕ ಇಂಜಿನಿಯರ್ ರಮೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ರಾಮಕೃಷ್ಣ,ಕರುಣಾಮಯ, ಎಲ್ಲೇಮಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನ ವೆಂಕಟ್, ಮುಖಂಡರುಗಳಾದ ರಾಜೂಗೌಡ, ಮಂಜೇಶ್ ಗೌಡ,ಎಸ್.ಆರ್ ಮಹಾದೇವ್,ಪಾಳ್ಯ ಗೋಪಾಲ್ ನಾಯಕ, ಕುರಟ್ಟಿ ಹೊಸೂರು ನಾಗರಾಜ್, ಗುಂಡಾಪುರ ಗುರು, ಕೃಷ್ಣ,ಎಲ್. ಪಿ,ಎಸ್,ರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್