ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ,ಅದು ಮನಸ್ಸು ಮತ್ತು ದೇಹವನ್ನು ಬೆಸೆದು ಆಧ್ಯಾತ್ಮದ ಉತ್ತುಂಗಕ್ಕೆ ಕರೆದೊಯ್ಯುವ ಪ್ರಕ್ರಿಯೆಯಾಗಿದೆ ಎಂದು ಶಿಕ್ಷಕ ಎಸ್ ಎಸ್ ಲಾಯದಗುಂದಿ ಹೇಳಿದರು.
ಇನ್ನೋರ್ವ ಶಿಕ್ಷಕ ಮಹಾಂತೇಶ ವಂದಾಲಿ ಮಾತನಾಡುತ್ತಾ, ನಮ್ಮ ಭಾರತೀಯ ಪರಂಪರೆಯ ದೊಡ್ಡ ಕೊಡುಗೆಯಾಗಿರುವ ಯೋಗ ಇಂದು ಜಗತ್ತನ್ನೇ ಆಕರ್ಷಿಸುತ್ತಿದೆ. ಸಾಂಪ್ರದಾಯಿಕ ಯೋಗ ಪದ್ಧತಿ ಇಂದು ವೈಜ್ಞಾನಿಕವಾಗಿ ರೂಪಾಂತರವಾಗಿದೆ. ಯೋಗ ಮತ್ತು ನಿಸರ್ಗ ಚಿಕಿತ್ಸೆ ಎಂಬ ವೈದ್ಯಕೀಯ ಕೋರ್ಸುಗಳು ನಡೆಯುತ್ತಿವೆ ಎಂದರು.
ಶಿಕ್ಷಕರಾದ ಸುಭಾಸ್ ಕಣಗಿ, ಅಶೋಕ ಬಳ್ಳಾ ಮಕ್ಕಳಿಗೆ ಯೋಗ ಧ್ಯಾನ ಮತ್ತು ಪ್ರಾಣಾಯಾಮದ ಚಟುವಟಿಕೆಗಳನ್ನು ಹೇಳಿಕೊಟ್ಟರು. ಪ್ರಭಾರಿ ಮುಖ್ಯಗುರು ಎಂ.ಜಿ. ಬಡಿಗೇರ, ಏಕಲ್ ವಿದ್ಯಾಲಯದ ಫಕೀರಮ್ಮ ಹುಗ್ಗಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.