ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಹಿಳೆಯರನ್ನು ಭಾರವಾದ ಕೊಡಗಳನ್ನು ಹೊತ್ತುಕೊಂಡು ದೂರದಿಂದ ನೀರು ತರುವ ಹಳೆಯ ದುಸ್ಸಾಹಸದಿಂದ ಮುಕ್ತಗೊಳಿಸಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.ಆದರೆ ಗುತ್ತಿಗೆದಾರರು ಮಾತ್ರ ಇಂಡಿ ತಾಲೂಕಿನ ತಾಂಬಾ ಗ್ರಾಮದ ವಾರ್ಡ್ ನಂಬರ್ 8 ಮತ್ತು 9 ರಲ್ಲಿ ಕೆಲಸ ಮಾಡಿದ ಏಳು ಎಂಟು ತಿಂಗಳು ಗತಿಸುವ ಮುನ್ನವೆ ಕಳಪೆ ಮಟ್ಟದ ವಸ್ತುಗಳು ಉಪಯೋಗಿಸುವುದರಿಂದ
ಜಲ್ ಜೀವನ್ ಮಿಷನ್ ನ ನಳಗಳು ಮುರಿದು ಹಾಳಾಗಿ ಹೋಗಿವೆ ಆ ನಳಗಳಿಗೆ ಸರಿಯಾಗಿ ನೀರು ಬರುವುದಿಲ್ಲ ಎಂದು ಅಲ್ಲಿಯ ಸ್ಥಳೀಯ ಸಾರ್ವಜನಿಕರು,ಮುಖಂಡರು ದೂರಿದ್ದಾರೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ಈ ಕಾಮಗಾರಿ ಕೇವಲ ಬಿಲ್ ತೆಗಿಯಕ್ಕ ಮಾಡ್ಯಾರಿ ಇದರಿಂದ ನಮಗ ಏನೂ ಅನುಕೂಲ ಆಗಿಲ್ಲ
ನೀರು ಕೂಡಾ ಬರುವುದಿಲ್ಲ ಪೈಪ್ ಎಲ್ಲಾ ಮುರಿದು ಹೋಗ್ಯಾವರಿ ಎನ್ನುತ್ತಾರೆ ಗೃಹಿಣಿ ಇಂದ್ರಾಬಾಯಿ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ