ಕಾನೂನು ಬಾಹಿರವಾಗಿ ನಡೆಯುತ್ತಿರುವ ತುಮಕೂರಿನ ವಿದ್ಯೋದಯ ಲಾ ಕಾಲೇಜು,
ಕಣ್ಣು ಮುಚ್ಚಿ ಕುಳಿತಿದೆಯಾ ಕಾನೂನು ಇಲಾಖೆ?ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಾನೂನೇ ಗೊತ್ತಿಲ್ಲವಾ?
ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಅನುರಾಧಾ ವಸ್ತ್ರದ(ಕೆ.ಎ.ಎಸ್) ರವರಿಗೆ ಓದೋಕೆ ಬರೋದಿಲ್ಲವಾ?
ಪ್ರೊ.ಡಾ.ಸಿ.ಬಸವರಾಜು ಮಾನ್ಯ ಕುಲಪತಿಯವರು ಭ್ರಷ್ಟರನ್ನು ರಕ್ಷಿಸುತ್ತಿದ್ದಾರಾ?ಮತ್ತು ಅವರೇ ಭ್ರಷ್ಟಾಚಾರ ಎಸಗಿದ್ದಾರಾ?
ಎಲ್ಲಿದ್ದೀರಾ ಕಾನೂನು ಸಚಿವರೇ ಬನ್ನಿ ಎಲ್ಲದಕ್ಕೂ ಉತ್ತರಿಸಿ.
ಕಾನೂನು ಶಿಕ್ಷಣ ಎಂಬುದು ಒಂದು ಪವಿತ್ರವಾದ ಶಿಕ್ಷಣವಾಗಿರಬೇಕು ಒಂದು ವೇಳೆ ಈ ಕಾನೂನು ಶಿಕ್ಷಣ ಕಲುಷಿತವಾದರೆ ಸಮಾಜದಲ್ಲಿ ಶೋಷಿತರು ಹಾಗೂ ಅನ್ಯಾಯಕ್ಕೆ ಒಳಗಾದವರು ನ್ಯಾಯದಿಂದ ವಂಚಿತರಾಗುವ ಸಾಧ್ಯತೆಯೇ ಹೆಚ್ಚು ಹೀಗಿರುವಾಗ ಈ ಕಾನೂನು ಶಿಕ್ಷಣವನ್ನು ಅಚ್ಚುಕಟ್ಟಾಗಿ, ನ್ಯಾಯಯುತವಾಗಿ ಹಾಗೂ ಪವಿತ್ರವಾಗಿ ನೀಡಬೇಕಾದುದ್ದು ಸರ್ಕಾರದ ಹೊಣೆಯಾಗಿರುತ್ತದೆ ಹೀಗಿರುವಾಗ ತುಮಕೂರಿನ “ವಿದ್ಯೋದಯ ಲಾ ಕಾಲೇಜು” 1993 ರಿಂದ ಕಾನೂನು ಬಾಹಿರವಾಗಿ ನಡೆಯುತ್ತಿರುವುದನ್ನು ನೋಡಿದರೆ ಸರ್ಕಾರ ಎಡವಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.
ವಿದ್ಯೋದಯ ಲಾ ಕಾಲೇಜು:
ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ವಿ.ಸುಬ್ರಮಣ್ಯಸ್ವಾಮಿಗಳು ವಿದ್ಯೋದಯ ಎಜುಕೇಷನ್ ಸೊಸೈಟಿಯನ್ನು 1958 ರಲ್ಲಿ ಆರಂಭಿಸಿ,ಇದೇ ಸಂಸ್ಥೆ ವತಿಯಿಂದ ವಿದ್ಯೋದಯ ಲಾ ಕಾಲೇಜನ್ನು ಆರಂಭಿಸುತ್ತಾರೆ.
1992 ವರೆಗೆ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ವಿ.ಸುಬ್ರಮಣ್ಯಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಿದ್ಯೋದಯ ಎಜುಕೇಷನ್ ಸೊಸೈಟಿ
ವತಿಯಿಂದ 1992 ವರೆಗೆ ಯಶಸ್ವಿಯಾಗಿ ವಿದ್ಯೋದಯ ಲಾ ಕಾಲೇಜನ್ನು ನಡೆಸಿಕೊಂಡು ಬಂದಿರುತ್ತದೆ.ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕೆ.ವಿ.ಸುಬ್ರಮಣ್ಯಸ್ವಾಮಿಗಳು ಮಾರ್ಚ್ 1992 ರಲ್ಲಿ ನಿಧನ ಹೊಂದುತ್ತಾರೆ ನಂತರ ಕೆಲವರು ವಿದ್ಯೋದಯ ಎಜುಕೇಷನ್ ಸೊಸೈಟಿಯನ್ನು ನಿಷ್ಕ್ರಿಯಗೊಳಿಸಿ ವಿದ್ಯೋದಯ ಫೌಂಡೇಶನ್ ಟ್ರಸ್ಟ್ ಅನ್ನು ಆರಂಭ ಮಾಡಿ ಇದೇ ಟ್ರಸ್ಟ್ ವಿದ್ಯೋದಯ ಲಾ ಕಾಲೇಜಿನ ಆಡಳಿತ ಸಂಸ್ಥೆ ಎಂದು ಬಿಂಬಿಸಿ 1993 ವಿದ್ಯೋದಯ ಲಾ ಕಾಲೇಜನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಮತ್ತು ಈ ವಿದ್ಯೋದಯ ಫೌಂಡೇಶನ್ ಟ್ರಸ್ಟ್ ಹಲವು ಅಕ್ರಮ ನೇಮಕಾತಿಗಳನ್ನು ಮಾಡಿಕೊಂಡು ಸರ್ಕಾರವನ್ನು ವಂಚಿಸುತ್ತಿರುವುದನ್ನು ಕಾಣಬಹುದು.
ವಿದ್ಯೋದಯ ಲಾ ಕಾಲೇಜಿಗೆ ಸಿಕ್ಕೇ ಬಿಟ್ಟಿತು ವೇತನ ಅನುದಾನ:
ಈ ಕಾನೂನು ಬಾಹಿರವಾಗಿ ನಡೆಯುತ್ತಿರುವ ವಿದ್ಯೋದಯ ಲಾ ಕಾಲೇಜಿಗೆ ವೇತನಾನುದಾನವು ಕೂಡಾ ಸರ್ಕಾರದಿಂದ ಲಭಿಸಿರುವುದು ಅಚ್ಚರಿಯ ಸಂಗತಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಕಾಲೇಜಿಗೆ ಸರ್ಕಾರ ಕಣ್ಣು ಮುಚ್ಚಿಕೊಂಡು ವೇತನಾನುದಾನವನ್ನು ನೀಡಲಾಗಿದೆಯೇ ಅಥವಾ ವಿದ್ಯೋದಯ ಫೌಂಡೇಶನ್ ಟ್ರಸ್ಟ್ ನವರು ಸರ್ಕಾರವನ್ನೇ ವಂಚಿಸಿ ವೇತನಾನುದಾನವನ್ನು ಪಡೆಯಲಾಗಿದೆಯೇ ಎಂದು ತನಿಖೆಯಾಗಬೇಕಿದೆ.
ಕಣ್ಣು ಮುಚ್ಚಿ ಕುಳಿತಿದೆಯಾ ಕಾನೂನು ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ
ವೇತನನಾನುದಾನವನ್ನು ನೀಡುವ ಸಂದರ್ಭದಲ್ಲಿ ಕಾಲೇಜಿಗೆ ಸಂಭಂದ ಪಟ್ಟ ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ಮಾಡಿ ಕಾಲೇಜಿಗೆ ವೇತನಾನುದಾನವನ್ನು ನೀಡಬೇಕಾಗಿರುತ್ತದೆ,ಆದರೆ ಈ ಕಾನೂನು ಬಾಹಿರವಾಗಿ ನೆಡೆಯುತ್ತಿರುವ ಕಾಲೇಜಿನ ಅಕ್ರಮನ್ನು ಪತ್ತೆ ಹಚ್ಚುವಲ್ಲಿ ಕಾನೂನು ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳು ವಿಫಲವಾಗಿದ್ದವೆಯೇ?ಅಥವಾ ಅಲ್ಲಿನ ಅಧಿಕಾರಿಗಳು ಲಂಚವನ್ನು ಪಡೆದು ವೇತನಾನುದಾನವನ್ನು ಕಾಲೇಜಿಗೆ ನೀಡಲಾಗಿದೆಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.ಒಟ್ಟಾರೆಯಾಗಿ ಈ ಇಲಾಖೆಗಳ ಬೇಜವಾಬ್ಧಾರಿತನಕ್ಕೆ ಒಂದು ಕಾನೂನು ಕಾಲೇಜು ಕಾನೂನು ಬಾಹಿರವಾಗಿ ನಡೆಯುತ್ತಿರುವುದು ಒಂದು ಶೋಚನೀಯ ಸಂಗತಿ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಾನೂನೇ ಗೊತ್ತಿಲ್ಲವಾ?
ಸದ್ಯದಲ್ಲಿ ಈ ವಿದ್ಯೋದಯ ಲಾ ಕಾಲೇಜು ಕಾರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ.ಈ ವಿಶ್ವ ವಿದ್ಯಾಲಯದವರಿಗೆ ಈ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಾಲೇಜನ್ನು ಗುರುತಿಸಲು ಸಾಧ್ಯವಾಗಿಲ್ಲವೇ ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ,ಕಾನೂನು ವಿಶ್ವವಿದ್ಯಾಲಯ ಎಂದಮೇಲೆ ಕಾನೂನು ತಜ್ಞರು ಹಾಗೂ ಕಾನೂನಿನ ಮೇಧಾವಿಗಳೇ ಇರುತ್ತಾರೆ,ಆದರೂ ಇಂತಹ ಕಾನೂನು ಭಾಹಿರವಾಗಿ ನಡೆಯುತ್ತಿರುವ ಲಾ ಕಾಲೇಜನ್ನು ಪತ್ತೆ ಹಚ್ಚದೆ ಇರುವುದು ಶೋಚನೀಯ ಸಂಗತಿ ಹಾಗೂ ಕಾರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಾನೂನೇ ಗೊತ್ತಿಲ್ಲವಾ ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ.
ಕಾನೂನು ವಿಷಯದಲ್ಲಿ ಪದವಿಯನ್ನು ಪಡೆಯದವರನ್ನು ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರನ್ನಾಗಿ ಈ ವಿಶ್ವವಿದ್ಯಾಲಯದಲ್ಲಿ ನೇಮಕ ಮಾಡಿರುವುದನ್ನು ಕಾಣಬಹುದು ಮತ್ತು ಆ ನಿರ್ದೇಶಕರಿಗೆ ಈ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಾಲೇಜನ್ನು ಪತ್ತೆಹಚ್ಚುವುದು ಹೇಗೆ ತಾನೇ ಸಾಧ್ಯ ಏಕೆಂದರೆ ಅವರಿಗೆ ಕಾನೂನಿನ ಅರಿವಿರುವುದಿಲ್ಲ.
ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧಾ ವಸ್ತ್ರದ,(ಕೆ.ಎ.ಎಸ್) ರವರಿಗೆ ಓದೋಕೆ ಬರೋದಿಲ್ಲವಾ ?
ಯಾವುದೇ ಕಾಲೇಜು ಈ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಂಯೋಜನೆ ಮರು ನವೀಕರಣ ಮಾಡಬೇಕಿದ್ದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಕಾಲೇಜಿನವರು ಸಂಯೋಜನೆ ಮರು ನವೀಕರಣದ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಹಾಗೆಯೇ ಸದ್ಯದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಅನುರಾಧ ವಸ್ತ್ರದ್ ಕೆ.ಎ.ಎಸ್ ಅಧಿಕಾರಿ ದರ್ಜೆಯವರು,ಇವರು ಈ ವಿದ್ಯೋದಯ ಲಾ ಕಾಲೇಜಿನ ಸಂಯೋಜನೆ ಮರು ನವೀಕರಣದ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಲಿಲ್ಲವೇ ಎಂಬ ಪ್ರಶ್ನೆಗಳು ಕಾಡುತ್ತಿವೆ ಮತ್ತು ಒಂದುವೇಳೆ ವಿದ್ಯೋದಯ ಲಾ ಕಾಲೇಜಿನ ಸಂಯೋಜನೆ ಮರು ನವೀಕರಣದ ಅರ್ಜಿಯನ್ನು ಸರಿಯಾಗಿ ಪರಿಶೀಲನೆ ಮಾಡಿದ್ದಲ್ಲಿ ಈ ಕಾನೂನು ಭಾಹಿರವಾಗಿ ನಡೆಯುತ್ತಿರುವ ಕಾಲೇಜನ್ನು ಸರಳವಾಗಿಯೇ ಪತ್ತೆಹಚ್ಚಬಹುದು ಅಥವಾ ಇವರಿಗೆ ಆ ಅರ್ಜಿಯನ್ನೇ ಓದೋಕೆ ಬರಲಿಲ್ಲವೇ ಎಂಬ ಪ್ರಶ್ನೆಯು ಉದ್ಭವಿಸಿದೆ.
ಪ್ರೊ.ಡಾ.ಸಿ.ಬಸವರಾಜು ಮಾನ್ಯ ಕುಲಪತಿಯವರು ಭ್ರಷ್ಟರನ್ನು ರಕ್ಷಿಸುತ್ತಿದ್ದಾರಾ?ಮತ್ತು ಅವರೇ ಭ್ರಷ್ಟಾಚಾರ ಎಸಗಿದ್ದಾರಾ?
ಪ್ರೊ.ಡಾ.ಸಿ.ಬಸವರಾಜು,
ಮಾನ್ಯ ಕುಲಪತಿಗಳು,ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ,ಹುಬ್ಬಳ್ಳಿ.
ವಿದ್ಯೋದಯ ಲಾ ಕಾಲೇಜು ಕುರಿತಾಗಿ ಹಲವಾರು ಸತ್ಯಯುತವಾದ ಆರೋಪಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರುಗಳ ರೂಪದಲ್ಲಿ ಸಲ್ಲಿಕೆಯಾಗಿದ್ದರೂ ಯಾವುದೇ ವಿಧವಾದ ಕ್ರಮಗಳನ್ನು ಕೂಡಾ ಕೈಗೊಂಡಿರುವುದಿಲ್ಲ ಇಲ್ಲಿ ಪ್ರೊ.ಡಾ.ಸಿ.ಬಸವರಾಜು ಮಾನ್ಯ ಕುಲಪತಿಗಳು ರವರು ಭ್ರಷ್ಟರನ್ನು ರಕ್ಷಿಸುತ್ತಿದ್ದಾರಾ?ಮತ್ತು ಅವರೇ ಭ್ರಷ್ಟಾಚಾರ ಎಸಗಿದ್ದಾರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ನ್ಯಾಯಾಂಗದ ದುರುಪಯೋಗ ಮಾಡಿಕೊಳ್ಳಲಾಗಿದೆಯೇ?
ಕಾನೂನು ಬಾಹಿರವಾಗಿ ನಡೆಯುತ್ತಿರುವ ವಿದ್ಯೋದಯ ಲಾ ಕಾಲೇಜು ಮತ್ತು ಅದರ ಆಡಳಿತ ನಿರ್ವಹಣೆ ಮಾಡುತ್ತಿರುವ ವಿದ್ಯೋದಯ ಫೌಂಡೇಶನ್ ಟ್ರಸ್ಟ್ ತನ್ನ ಅಕ್ರಮ ಚಟುವಟಿಕೆ, ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಹಾಕಲು ಕಾಲೇಜಿನ ಘನತೆ ಕಾಪಾಡಲು ಕರ್ನಾಟಕ ಹೈಕೋರ್ಟ್ ಹಾಗೂ ತುಮಕೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನು ಕಾಲೇಜು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿಸುತ್ತಿದ್ದು,ಈ ಕಾಲೇಜಿನ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ನಡೆಸುವವರಿಗೆ ನ್ಯಾಯಾಂಗ ಮತ್ತು ಗೌರವಾನ್ವಿತ ನ್ಯಾಯಾಧೀಶರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿರುವುದು ಶೋಚನೀಯ ಸಂಗತಿ.
ಈ ಮೂಲಕ ಸದರಿ ಕಾಲೇಜು ಮತ್ತು ಅದರ ಆಡಳಿತ ಮಂಡಳಿಯು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ತುಮಕೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಘನತೆ ಮತ್ತು ಗೌರವವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಕೂಡಾ ಕಂಡುಬಂದಿದೆ.
ಎಲ್ಲಿದ್ದೀರಾ ಕಾನೂನು ಸಚಿವರೇ ಬನ್ನಿ ಎಲ್ಲದಕ್ಕೂ ಉತ್ತರಿಸಿ.
(ಹೆಚ್. ಕೆ ಪಾಟೀಲ್,
ಕಾನೂನು ಸಚಿವರು,ಕರ್ನಾಟಕ ಸರ್ಕಾರ)
ಒಂದು ಕಾನೂನು ಕಾಲೇಜೇ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದರೆ ಇದು ಸರ್ಕಾರದ ವೈಫಲ್ಯವೇ ಸರಿ ಹೀಗಿರುವಾಗ ಕಣ್ಣು ಮುಚ್ಚಿ ಕುಳಿತಿದೆಯಾ ಕಾನೂನು ಇಲಾಖೆ?ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಾನೂನೇ ಗೊತ್ತಿಲ್ಲವಾ?, ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ. ಅನುರಾಧಾ ವಸ್ತ್ರದ(ಕೆ.ಎ.ಎಸ್) ರವರಿಗೆ ಓದೋಕೆ ಬರೋದಿಲ್ಲಾವಾ?,ಪ್ರೊ.ಡಾ.ಸಿ.ಬಸವರಾಜು ಮಾನ್ಯ ಕುಲಪತಿಗಳು ರವರು ಭ್ರಷ್ಟರನ್ನು ರಕ್ಷಿಸುತ್ತಿದ್ದಾರಾ ? ಎಂಬ ಪ್ರಶ್ನೆಗಳಿಗೆ ಮಾನ್ಯ ಸಚಿವರಾದ ಹೆಚ್.ಕೆ. ಪಾಟೀಲ್ ರವರೆ ಉತ್ತರಿಸಬೇಕಿದೆ ಮತ್ತು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
-ಕಿರಣ್ ಕೆ.ಟಿ, ವಕೀಲರು,
ತುಮಕೂರು.
83108 63024