ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ
ಪತಂಜಲಿ ಯೋಗ ಸಮಿತಿ,ಕೊಟ್ಟೂರು,ಆಯುಷ್ಮಾನ್ ಅರೋಗ್ಯ ಮಂದಿರ, ದೂಪದಹಳ್ಳಿ,ಹಸಿರು ಹೊನಲು ಸೇವಾ ಸಂಸ್ಥೆ, ಕೊಟ್ಟೂರು. ಜೆ.ಸಿ ಐ. ಕೊಟ್ಟೂರು ಕಾಟನ್ ಕೊಟ್ಟೂರು ಇವರ ಸಹಯೋಗದಲ್ಲಿ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕೊಟ್ಟೂರು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
10 ನೇ ಅಂತರರಾಷ್ಟ್ರೀಯ ಯೋಗ ದಿನವಾದ ಜೂ. 21 ರ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ತಾಲೂಕು ಕ್ರೀಡಾಂಗಣದಲ್ಲಿ ಗುರುದೇವ ಆಂಗ್ಲ ಮಾದ್ಯಮ ಶಾಲೆ, ಎನ್.ಸಿ.ಸಿ. ಶಿಬಿರಾರ್ಥಿಗಳು, ಅಗ್ನಿ ವೀರ ತರಬೇತಿದಾರರು,ಸ.ಬಾ.ಪ್ರೌಢಶಾಲೆ ಮಕ್ಕಳು ಹಾಗೂ ಪಟ್ಟಣದ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು, ಶಿಕ್ಷಕರು,ಶಿಕ್ಷಣ ಇಲಾಖೆಯಿಂದ ಸಿ ಆರ್ ಪಿ,ಸಿಇಓ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಂಜಾರ ನಾಗರಾಜ್ ನೆರೆದಿದ್ದ ಎಲ್ಲಾ ಶಾಲಾ ಮಕ್ಕಳಿಗೂ, ಯೋಗದ ವಿವಿಧ ರೀತಿಯ ಆಯಾಮಗಳನ್ನು ಹೇಳಿಕೊಟ್ಟು ಮಧ್ಯದಲ್ಲಿ ಮಾತಿನ ಚಟಾಕಿ ಸಿಡಿಸಿ ಮಕ್ಕಳನ್ನು ನಗಿಸುತ್ತಿದ್ದರು. ಯೋಗ ಇದ್ದರೆ ಯೋಗ್ಯತೆ ಬರುತ್ತದೆ ಮನುಷ್ಯನ ಆಯಸ್ಸು ವೃದ್ಧಿಸುತ್ತದೆ, ಅಸ್ತಮಾ, ಸಕ್ಕರೆ ಕಾಯಿಲೆ, ಬಿಪಿಯಂತಹ ರೋಗಗಳನ್ನು ನಿಯಂತ್ಯಣದಲ್ಲಿ ಇಡಬಹುದು ಎಂದರು.
ಶಾಲಾ ಮಕ್ಕಳು ಸಾರ್ವಜನಿಕರು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದ್ದರು.ಆದರೆ ತಾಲೂಕು ಆಡಳಿತ ಮಾತ್ರ ನಮಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಸಂಬಂಧವಿಲ್ಲವೇನೋ ಎಂಬುವಂತೆ ಇತ್ತು ಖಾಸಗಿ ಸಂಸ್ಥೆಗಳ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆದದ್ದು ಸರ್ಕಾರದ ದೂರಾಡಳಿತಕ್ಕೆ ಇಡಿದ ಕೈಗನ್ನಡಿಯಂತೆ ಇತ್ತು. ಪಟ್ಟಣದ ಖಾಸಗಿ ಶಾಲೆಗಳು, ಸರ್ಕಾರಿ ಶಾಲೆಗಳು ಆಯಾ ಶಾಲೆಗಳಲ್ಲೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಚರಣೆ ಮಾಡಿದ್ದು ಕಂಡುಬಂದಿತ್ತು. ಒಟ್ಟಾರೆ ಯೋಗ ದಿನಾಚರಣೆಯನ್ನು ತಾಲೂಕು ಆಡಳಿತ ಮಾಡುವುದಕ್ಕೂ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಖಾಸಗಿ ಸಂಸ್ಥೆಯವರು ಮಾಡಿದ್ದಾರೆ. ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಜನರಿಂದ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತು.