ಕಲಬುರಗಿ/ಚಿತ್ತಾಪುರ:
ಪೇಟ್ರೋಲ್ ಮತ್ತು ಡಿಸೇಲ್
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿತ್ತಾಪುರ ಪಟ್ಟಣದ ಲಾಡ್ಜೀಂಗ್ ಕ್ರಾಸ್’ನಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರದ ರವೀಂದ್ರ ಸಜ್ಜನಶೆಟ್ಟಿ ಅವರ ನೇತೃತ್ವದಲ್ಲಿ ಮುಖಂಡರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ಬಿಜೆಪಿ ಮುಖಂಡ ಸುರೇಶ ಬೆನಕನಳ್ಳಿ ಮಾತನಾಡಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದಾಗಿನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ ದಿನನಿತ್ಯ ತರಕಾರಿ ಬೆಲೆ ಗಗನಕ್ಕೆ ಏರುತ್ತಿವೆ ಜನ ಸಾಮಾನ್ಯರು ಮನೆ ನಡೆಸಬೇಕಾದರೇ ತೊಂದರೆ ಅನುಭವಿಸುವಂತಾಗಿದೆ ಅದರಲ್ಲಿ ಇವರು ಪೇಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯನ್ನಾಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೆಳೆ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪಕ್ಷದ ಮುಖಂಡರು ಕೆಲಕಾಲ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ ಭಂಕಲಗಾ, ನೀಲಕಂಠ ಪಾಟೀಲ್, ಗೋಪಾಲ್ ರಾಠೋಡ, ಮಹ್ಮದ್ ಯೂನೋಸ್, ಮಲ್ಲಿಕಾರ್ಜುನ ಪೂಜಾರಿ, ಅಕ್ಕಮಹಾದೇವಿ, ನಾಗುಬಾಯಿ ಜಿತುರೆ, ತಮ್ಮಣ್ಣ ಡಿಗ್ಗಿ, ಬಾಲಾಜಿ ಬುರಬುರೆ, ಶಿವರಾಮ ಚವ್ಹಾಣ ಸೇರಿದಂತೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು
ವರದಿ ಮೊಹಮ್ಮದ್ ಅಲಿ,ಚಿತ್ತಾಪುರ