ಮಹಾರಾಷ್ಟ್ರ/ಜತ್ತ:ಶೋಲಾಪೂರ ಹಾಗೂ ಸಾಂಗಲಿ ಜಿಲ್ಲೆಗಳಲ್ಲಿ ಬರುವ ಅಕ್ಕಲಕೋಟ ಹಾಗೂ ಜತ್ತ ತಾಲೂಕುಗಳಲ್ಲಿ ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಡಿ.ಎಡ್.ಬಿ ಎಡ್. ಶಿಕ್ಷಣ ಪಡೆದ ನೂರಾರು ಅಭ್ಯರ್ಥಿಗಳಿಗೆ ನೇಮಕ ಮಾಡದೆ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಮಹಾರಾಷ್ಟ್ರ ಸರ್ಕಾರ ಮರಾಠಿ ಶಿಕ್ಷಕರ ನೇಮಕ ರದ್ದುಮಾಡಿ ಕನ್ನಡ ಶಾಲೆಗಳಲ್ಲಿ ಕನ್ನಡಶಿಕ್ಷಕರ ನೇಮಕ ಮಾಡಬೇಕು ಇಲ್ಲದೇ ಹೋದರೆ ಉಗ್ರ ಹೋರಾಟ ಮಾಡುವುವಾಗಿ ಗಡಿ ಕನ್ನಡಿಗರ ಪರವಾಗಿ ಕನ್ನಡ ಪರ ಹೋರಾಟಗಾರ ಹಾಗೂ ಸಾಹಿತಿ ದಯಾನಂದ ಪಾಟೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
