ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ ಶಾಲೆಗೆ ಚಿಕ್ಕಮಗಳೂರು ಜಿಲ್ಲೆಯ ಡಯಟ್ ನ ಉಪನ್ಯಾಸಕರಾದ ಶ್ರೀ ಜಿ ಆರ್ ಪ್ರಶಾಂತ್ ರವರು, ಮಕ್ಕಳ ಜ್ಞಾನ ಹೆಚ್ಚಿಸಲು ಒಂದು ವರ್ಷದ ದಿನ ಪತ್ರಿಕೆಯನ್ನು ವ್ಯವಸ್ಥೆ ಮಾಡಿದರು.ಇವರ ಕಾರ್ಯವನ್ನು ಶಾಲೆಯ ಮುಖ್ಯಗುರುಗಳಾದ ಮಮತರವರು ಸ್ಮರಿಸಿದರು.ಶಾಲೆಯ ಸಹಶಿಕ್ಷಕರಾದ ಸಿ ಆರ್ ಸುರೇಶ್ (ಚೌಡ್ಲಾಪುರ ಸೂರಿ)ರವರು ಮಾತನಾಡಿ ತಂತ್ರಜ್ಞಾನದ ಜಗತ್ತಿನಲ್ಲಿ ಪತ್ರಿಕೆಗಳು ಮುಳುಗುತ್ತಿರುವುದು ವಿಷಾದನೀಯ.ಇಂದಿನ ಓದುವಿಕೆ ನಿರಾಸಕ್ತಿಗೆ ಪತ್ರಿಕೆಗಳ ಬಗ್ಗೆ ಒಲವು ತೋರದಿರುವುದೇ ಪ್ರಮುಖ ಕಾರಣ.ನಾವೆಲ್ಲರೂ ಮೋಹದ ನಿದ್ದೆಯಿಂದ ಹೊರಬಂದು ನಮ್ಮ ಮಕ್ಕಳಿಗೆ ಪತ್ರಿಕೆಯ ಮಹತ್ವವನ್ನು ತಿಳಿಸಬೇಕು.ಪ್ರಶಾಂತ್ ರವರಂತೆ ಪತ್ರಿಕೆ ಹಿಡಿಸುವ ಕಾರ್ಯಕ್ಕೆ ನಾವೆಲ್ಲಾ ಮುಂದಾಗಬೇಕು ಎಂದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.