ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿಯಲ್ಲಿ ಈ ಮೊದಲಿಗೆ ಕಳಕಪುರ,ಹೊಸಳ್ಳಿ,ಜಿಗಳೂರು ಸೇರಿ ಕಳಕಪ್ಪ ರಾಜೂರ್ ಅಧ್ಯಕ್ಷರಾಗಿದ್ದರು.
ಕಳಕಪುರ ಗ್ರಾಮವು ಇಟಗಿ ಪಂಚಾಯತಿ ವ್ಯಾಪ್ತಿಗೆ ಹೋದ ಕಾರಣ ಆಗ ಅಧ್ಯಕ್ಷರಾಗಿ ಶೋಭಾ ಗೊಟಗೊಂಡರವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.
ಈಗ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ನಂತರ ಆ ಸ್ಥಾನಕ್ಕೆ ಅಧ್ಯಕ್ಷರಾಗಿ 24-6-2024 ರಂದು ನೂತನವಾಗಿ ಬಸಪ್ಪ ಕಲ್ಲಪ್ಪ ಮಾರನಬಸರಿ ಅವರನ್ನು ಎಲ್ಲಾ ಸದಸ್ಯರ ಬಲದ ಒಮ್ಮತದಿಂದ ಆಯ್ಕೆ ಮಾಡಲಾಯಿತು.ಇದೇ ಸಮಯದಲ್ಲಿ ಗ್ರಾಮ ಅಭಿವೃದ್ಧಿ ಪಂಚಾಯಿತಿ ಅಧಿಕಾರಿಗಳು,ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ರೋಣ ಪುರಸಭೆ ಉಪಾಧ್ಯಕ್ಷರಾದಂತಹ ಮಿಥುನ್.ಜಿ.ಪಾಟೀಲ್ ಅಧ್ಯಕ್ಷರನ್ನು ಸನ್ಮಾನಿಸಿ ಅದ್ಭುತವಾಗಿ ಅವರು ಒಂದು ಮಾತು ಹೇಳಿದರು “ಆ ಜಾತಿ ಈ ಜಾತಿ “ಎನ್ನದೆ ಒಂದೇ ಎಂದು ಹೋಗು ಎಂದು ಅಧ್ಯಕ್ಷರಿಗೆ ಹೇಳಿದರು.ಸರ್ವ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಬಸಪ್ಪ ಮಾರನಬಸರಿ ಅವರು ಮಾತನಾಡಿ ಜನರಿಗೆ ತಲುಪುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ
ಕೃಷ್ಣಜೀರಾವ್ ಪಾಟೀಲ್
ಸಂಗಪ್ಪ ಮೆಣಸಿನಕಾಯಿ
ಕಳಕಪ್ಪ ರಾಜುರ್
ಗುರುಪಾದಪ್ಪ ಪಟ್ಟಣಶೆಟ್ಟಿ
ಬಸವರಾಜ ರಡ್ಡೇರ
ಬಸವರಾಜ ಪಟ್ಟಣಶೆಟ್ಟಿ
ಧರ್ಮಪ್ಪ ಕಂಬಳಿ
ವಿರುಪಾಕ್ಷಪ್ಪ ಸಾಲಿ
ಯಮನಪ್ಪ ಮಾದರ ಸೇರಿದಂತೆ ಊರಿನ ಗಣ್ಯ ವ್ಯಕ್ತಿಗಳು ಸಭೆಯಲ್ಲಿ ಹಾಜರಿದ್ದರು.
ವರದಿ-ಮಲ್ಲಪ್ಪ.ಗೂ.ಸೊಂಟಿ