ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟ ಕೇಂದ್ರಸ್ಥಾನದಲ್ಲಿ ಕಸ ಕಡ್ಡಿ ಸೇರಿದಂತೆ ತ್ಯಾಜ್ಯ ವಸ್ತುಗಳಿಂದ ರಾಶಿಯಿಂದ ಅನೈರ್ಮಲ್ಯ ತಾಂಡುವಾಡುತ್ತಿದ್ದು ಇದನ್ನು ತೆರವು ಗಒಳಿಸಿ ಸ್ವಚ್ಚತೆಗೊಳಿಸಬೇಕು ಎಂದು ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಒತ್ತಾಯಿಸಿದ್ದಾರೆ.
ಶ್ರೀ ಮಲೆ ಮಹದೇಶ್ವರಬೆಟ್ಟ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಜಾಗ ಎಂದು ಬೋರ್ಡ್ ನೆಟ್ಟಿದ್ದು ಇಲ್ಲಿ ಖಾಲಿ ಜಾಗದ ಸುತ್ತಲು ಜಾಲಿಗಿಡಗಳು ಬೆಳೆದಿವೆ. ಅಲ್ಲದೆ ವಾಸದ ಮನೆಯವರು ಗೃಹಬಳಕೆಯ ವಸ್ತುಗಳು ಸಹ ಬೀಸಾಡುತ್ತಿದ್ದು ಕೊಳಚೆ ನೀರು ಸಹ ಅರಿಯುತ್ತಿದೆ. ಅಲ್ಲದೆ ತಂಬಡಿಗೇರಿ ರಸ್ತೆಯಲ್ಲಿ ಗುರುನಗರದ ಬಳಿ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳ ರಾಶಿ ಇದೆ ಇದು ಶುಚಿತ್ವದಿಂದ ಕೂಡಿದೆ. ಈ ಸಂಬoಧ ಹಿಂದೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಚತೆ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ತ್ಯಾಜ್ಯವಸ್ತುಗಳ ರಾಶಿಯನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡಲಾಗುವುದು. ಘನತ್ಯಾಜ್ಯ ವಿಲೇವಾರಿ ಮಾಡಲು ಕಸಗಳನ್ನು ಒಂದೊಡೆ ಸಂಗ್ರಹಿಸಲಾಗಿ ಇದನ್ನು ತೆರವು ಮಾಡುವ ಕಾರ್ಯ ಶೀಘ್ರದಲ್ಲೇ ಆಗಲಿದೆ.
-ಕಿರಣ್ ಕುಮಾರ್,ಪಿಡಿಓ ಮಹದೇಶ್ವರಬೆಟ್ಟ.
ವರದಿ:ಉಸ್ಮಾನ್ ಖಾನ್