ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಹೋಬಳಿಯ ಪಳನಿಮೇಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಥಿಲವಾಗಿ ಬಿದ್ದು ಹೋಗುವ ಹಂತದಲ್ಲಿ ಇದೆ ಆದ್ದರಿಂದ ಇಂದು ದ.ಸಂ.ಸ ಅಂಬೇಡ್ಕರ್ ವಾದ ಸಂಘಟನೆಯ ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ವಿಭಾಗೀಯ ಸಂಚಾಲಕರು ಸಿದ್ದರಾಜು, ಹನೂರು ತಾಲೂಕು ಸಂಚಾಲಕರು ಮಾದೇಶ್, ರಾಮಾಪುರ ಸಂಚಾಲಕರು ಮಾರಿಯಪ್ಪ ಹಾಗೂ ಕೃಷ್ಣ ಮುರುಗೇಶ್ ಶಾಲೆಗೆ ಭೇಟಿ ನೀಡಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಜೊತೆ ಶಾಲೆಯ ಸ್ಥಿತಿಗತಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ದ ಸಂ ಸ ಅಂಬೇಡ್ಕರ್ ವಾದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್