ಸಿರುಗುಪ್ಪ:ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ,ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ.ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ ಹಾಗಾಗಿ ಯುವಜನತೆ ಜಾಗೃತರಾಗಿರಬೇಕು ಎಂದು ಸಿರುಗುಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಮ್ಮಣ್ಣ ನಾಯಕ್ ಹೇಳಿದರು.
ಸಿರುಗುಪ್ಪ ತಾಲ್ಲೂಕಿನ VKJ ಕಾಲೇಜಿನಲ್ಲಿ ಈದಿನ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ನಂತರ ಮಾತನಾಡಿದ ಡಿವೈಎಸ್ಪಿ ವೆಂಕಟೇಶ್ ಮಾತನಾಡಿ ಮಾದಕ ದ್ರವ್ಯ ವ್ಯಸನದಿಂದ ನಾನಾ ರೋಗಗಳು ಬರುತ್ತವೆ. ದುಶ್ಚಟಗಳಿಂದ ಯುವಕರು ದೂರವಿರಬೇಕು. ವಿದ್ಯಾರ್ಥಿಗಳು,ಮಾದಕ ದ್ರವ್ಯ ಸೇವನೆ ಮಾಡದಂತೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದರು.