ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ದಿ.27-6-2024 ರಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕಾ ಆಡಳಿತದಿಂದ ನಾಡ ಪ್ರಭು ಕೆಂಪೇಗೌಡರ 515 ನೆಯ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೊನ್ನಾಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಸಾಗಿತು.ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಪಟ್ಟ ರಾಜೇಗೌಡರು,
ತಾಲೂಕು ಉಪ ವಿಭಾಗಾಧಿಕಾರಿ ಅಭಿಷೇಕ್,ಪುರಸಭೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ನಿರಂಜನಿ ಮತ್ತು ಶಾಸಕರಾದ ಡಿ.ಜೆ.ಶಾಂತನಗೌಡ,ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಲ್ಲಾ ಇಲಾಖೆ ಅಧಿಕಾರಿಗಳು,ಶಿಕ್ಷಣ ಇಲಾಖೆಯ ಪ್ರಭಾರಿ ಬಿ ಓ ತಿಪ್ಪೇಶ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಾಡ ಪ್ರಭು ಕೆಂಪೇಗೌಡರು: ಬೆಂಗಳೂರು ನಗರವನ್ನು ಸೃಷ್ಟಿಸಿದ ಮಹಾಪುರುಷ. ಇವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸುತ್ತಾರೆ 1510ರಲ್ಲಿ ಮೊದಲನೆಯ ಕೆಂಪೇಗೌಡರು ಯಲಹಂಕದಲ್ಲಿ ಜನಿಸಿದರು ಸುಮಾರು 56 ವರ್ಷಗಳ ಕಾಲ ಸುಧೀರ್ಘ ಆಡಳಿತ ನಡೆಸಿ ಜನರ ಒಳಿತಿಗಾಗಿ ಶ್ರಮಿಸಿದ ವ್ಯಕ್ತಿ ನಾಡಪ್ರಭು ಕೆಂಪೇಗೌಡರು, ಬೆಂಗಳೂರಿನ ಜನರ ಹೃದಯ ಸಿಂಹಾಸನದಲ್ಲಿ ಇಂದು ರಾರಾಜಿಸುತ್ತಿದ್ದಾರೆ ಇಂದು ಬೆಂಗಳೂರು ವಿಶ್ವಮಾನ್ಯತೆ ಪಡೆದಿದೆ ಎಂದರೆ ಇದಕ್ಕೆ ಮೂಲಪುರುಷ ಕೆಂಪೇಗೌಡರು ಕಾರಣ ಈ ದಿನ ಇವರ ಜಯಂತೋತ್ಸವವನ್ನು ಆಚರಿಸುತ್ತಿರುವುದು ತುಂಬಾ ಸಂತೋಷದ ವಿಷಯ.
ವರದಿ-ಪ್ರಭಾಕರ್ ಡಿ.ಎಂ.