ಬಾಗಲಕೋಟೆ/ಹುನಗುಂದ:ಅಗತ್ಯ ತಂತ್ರಜ್ಞಾನ ಬಳಕೆಯೊಂದಿಗೆ ಯುವಕರು ಓದಿನ, ಜೊತೆ ಪೂರ್ವಜರ ಕೃಷಿ ಪದ್ಧತಿ ಮೂಲ ಒಕ್ಕಲುತನದ ಮರು ಜೀವಕ್ಕೆ ಹೆಚ್ಚು ಹೊತ್ತು ನೀಡಬೇಕೆಂದು ಸೌಂದರ್ಯ ಸೌಹಾರ್ದಯುತ ಕೃಷಿ ಪರಂಪರೆಯ ಗಚ್ಚಿನ ಮಠದ ವೇದಮೂರ್ತಿ ಮಹಾಂತಯ್ಯ ಗಚ್ಚಿನ ಮಠ ಹೇಳಿದರು
ಪಟ್ಟಣದ ಗಚ್ಚಿನ ಮಠದಲ್ಲಿ ನಾಡಿಗೆ ಹೆಸರಾದ ರೈತ ಮತ್ತು ಎತ್ತು ರಾಸುಗಳ ಹಬ್ಬ ಕಾರುಣ್ಣಿಮೆಯ ನಿಮಿತ್ತ ನಡೆಸಿದ ಕೃಷಿ ಪರಿಕರಿಗಳ ವಿಶೇಷ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತನಿಗೆ ಮತ್ತು ವರ್ಷವಿಡೀ ದುಡಿದು ಬೆಳೆದ ಫಸಲಿಗೆ ಬೆಲೆ ಇರದೆ ದಲ್ಲಾಳಿಗಳ ಮತ್ತು ಕೃಷಿ ನೀತಿ ಸರಿಯಾಗಿ ಇಲ್ಲದಿರುವುದಕ್ಕೆ ಮೂಲ ಕೃಷಿ ಪದ್ಧತಿ ದೂರವಾಗುತ್ತಿದೆ ರೈತನ ಉಳಿವಿಗೆ ಸೂಕ್ತ ಕೃಷಿ ನೀತಿ ಒದಗಿಸದಿದ್ದರೆ ಸೋತು ನೆಲಕಚ್ಚುವ ರೈತ ಮತ್ತು ಕೃಷಿ ಪದ್ಧತಿ ಹಿಂದೆ ಸರಿಯುವುದರಲ್ಲಿ ಸಂಶಯವೇ ಇಲ್ಲ ಸರ್ಕಾರ ಹೆಚ್ಚು ಗಮನಹರಿಸಿ ಸಾಕಷ್ಟು ಕೃಷಿ ಚಟುವಟಿಕೆಗಳನ್ನು ತಟ್ಟಿ ಉತ್ತೇಜನ ನೀಡಿ ಯುವಕರನ್ನು ಪ್ರೋತ್ಸಾಹಿಸಿದಾಗ ಮೂಲ ಕೃಷಿ ಚೇತರಿಕೆ ಆಗುತ್ತದೆ ಎಂದರು,
ರೈತ ನಾಗಪ್ಪ ತ್ಯಪ್ಪಿ ಕೃಷ್ಣ ಜಾಲಿಹಾಳ ಮಾತನಾಡಿದರು ಮುತ್ತಣ್ಣ ಹವಾಲ್ದಾರ್ ಪರಮೇಶ್ ಬಾಗವಾಡಗಿ ವೀರೇಶ್ ಕುರ್ತುಕೋಟಿ ಮಲ್ಲನಗೌಡ ಪಾಟೀಲ್ ವೆಂಕಟರಮಣಿ ಶಿವಪ್ಪ ಸುಂಕಾಪೂರ್ ಹಾಜರಿದ್ದರು.
