ಬಾಗಲಕೋಟ ಜಿಲ್ಲೆಯ ಹುನಗುಂದದ ಲೇಖಕ ಎಂ.ಡಿ ಚಿತ್ತರಗಿ ಅವರು ಮೊಟ್ಟಮೊದಲ ಬಾರಿಗೆ 5 ಸಾಲು 15 ಅಕ್ಷರ ಪದಗಳನ್ನು ಒಳಗೊಂಡ ಕವನ ಸಂಕಲನ ಹೊರ ತರುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಸರು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ ಎಂದು ಸವದತ್ತಿಯ ಸಾಹಿತಿ ವೈ.ಎಂ.ಯಾಕೋಳ್ಳಿ ಹೇಳಿದರು.
ಹುನಗುಂದ ಪಟ್ಟಣದ ಹೂನ ಕುಸುಮ ಸಾಹಿತ್ಯ ವೇದಿಕೆ ಹಾಗೂ ವಿ ಎಮ್ ಕೆ ಎಸ್ ಆರ್ ವಸ್ತ್ರದ ಹಾಗೂ ಕಲಾ ವಿಜ್ಞಾನ ಮತ್ತು ವಿ ಎಸ್ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ವಿ ಮ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಲೇಖಕ ಎಂ ಡಿ ಚಿತ್ತರಗಿ ಅವರ ಅಕ್ಷರ ಹೂ ಎಂಬ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಐದು ಅಕ್ಷರಗಳ ಪಂಚ ಪಾದಗಳ ಪುಟ್ಟ ಮದ್ಯ ಪ್ರಯೋಗಗಳನ್ನು ಮಾಡಿದ್ದಾರೆ ೨0೧ ಪದ್ಯಗಳನ್ನು ರಚಿಸಿದ್ದಾರೆ ಯಾವುದೇ ಪದ್ಯದಲ್ಲಿಯೂ ಅಕ್ಷರಗಳ ಲೆಕ್ಕಾಚಾರ ತಪ್ಪಿಲ್ಲ ಜೊತೆಗೆ ಕಾವ್ಯವು ಸೂರಿ ಹೋಗಿಲ್ಲ ನಿಜಕ್ಕೂ ಇದೊಂದು ವಿನೂತನ ಪ್ರಯೋಗ ಕಾವ್ಯವಾಗಿದೆ ಇಲ್ಲಿನ ಕಿರುಪದ್ಯಗಳು ವಿಶೇಷವಾಗಿವೆ ಕಾವ್ಯನಾತ್ಮಕ ಮತ್ತು ಅಕ್ಷರಾತ್ಮಕ ದೃಷ್ಟಿಕೋನದಿಂದ ಕವನವನ್ನು ರಚಿಸುವ ಮೂಲಕ ಕವಿ ಹೊಸ ಪದಗಳ ಸಂಕಲನ ಪ್ರಯೋಗಕ್ಕೆ ಮುಂದಾಗಿದ್ದಾರೆ ಕವಿ ಸಂಭ್ರಮದ ಜೊತೆಗೆ ವಾಸ್ತವಿಕ ನೆಲೆ ಗಮನಿಸಿದ್ದನ್ನು ಕಾಣಬಹುದು ಆಧುನಿಕ ಜಗತ್ತಿನಲ್ಲಿ ಅನೇಕ ತಲ್ಲನ ಗಳನ್ನು ಕವನ ಸಂಕಲನ ಒಳಗೊಂಡಿದೆ ಪ್ರಯೋಗದೃಷ್ಟಿಯಿಂದ ಅತ್ಯದ್ಭುತ ಕವನ ಸಂಕಲನ ಕೊಟ್ಟಿದ್ದಾರೆ. ಜಗತ್ತಿನ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಇತಿಹಾಸವಿದೆ ಜಿಲ್ಲೆಯಲ್ಲಿ ಹುನಗುಂದ ಸಾಹಿತ್ಯ ಚಟುವಟಿಕೆಯಿಂದ ಗುರುತಿಸಿಕೊಂಡಿದೆ ಎಂದರು ಲೇಖಕ ಎಂ ಡಿ ಚಿತ್ತರಗಿ ಮಾತನಾಡಿ ಇಂದಿನ ದಿನಗಳಲ್ಲಿ ಪುಸ್ತಕ ಹಾಗೂ ಸಾಹಿತ್ಯ ಕತ್ತೆ ಕಾದಂಬರಿ ಗಳ ಓದಿನ ಕೊರತೆ ಇದೆ ಮಕ್ಕಳಿಗೆ ಪುಸ್ತಕಗಳನ್ನು ಓದಿಸುವಲ್ಲಿ ನಾವು ವಿಫಲರಾಗಿದ್ದೇವೆ ನಮ್ಮ ನೆಲದ ಅಸ್ಮಿತೆ ಆಗಿರುವ ಸಾಂಪ್ರದಾಯಿಕ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಕಥೆ ಕಾದಂಬರಿ ಕವನ ಸೇರಿ ಸಾಹಿತ್ಯದ ನಾನಾ ಪ್ರಕಾರ ಗಳಲ್ಲಿ ದಾಖಲಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
ವಿಮಸಂಘದ ನಿರ್ದೇಶಕ ಅರುಣೋದಯ ದುಡ್ಗಿ ಪ್ರಾಚಾರ್ಯ ಎಸ್ ಕೆ ಮಠ ಮಾತನಾಡಿದರು ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್ ಎಸ್ ಮುಡಪಲದಿನ್ನಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಗೀತಾ ತಾರಿವಾಳ, ನಿರೂಪಿಸಿದರು ಗುಂಡಪ್ಪ ಕುರಿ ಸ್ವಾಗತಿಸಿದರು ಸಿದ್ದು ಶೀಲವಂತರ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.