ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಮಾಹಿತಿ ನೀಡದ ಗ್ರಾ.ಪಂಚಾಯತ್ ಅಧಿಕಾರಿಗಳು:ಸೂಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ
ಜೇವರ್ಗಿ:ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಗ್ರಾಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮತ್ತು ಅವುಗಳ ವೆಚ್ಚದ ಬಗ್ಗೆ ಮಾಹಿತಿ ಪಡೆಯಲು ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ಕಾಮಗಾರಿಯ ಮಾಹಿತಿಯನ್ನು ನೀಡದೆ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಕೊರೋನಾ ಸೋಂಕು ಬಂದ ನಂತರ ಹೆಚ್ಚಿನ ಕೆಲಸಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಖಾಸಗಿ ಕಂಪನಿಗಳಷ್ಟೇ ಅಲ್ಲದೆ, ಸರ್ಕಾರಿ ಕೆಲಸಗಳು ಕೂಡಾ ಆನ್‌ಲೈನ್ ಮೂಲಕವೇ ನಡೆಯುವಂತಾಗಿದೆ. ಆದರೆ ಜೇವರ್ಗಿ ತಾಲೂಕಿನ ನೇದಲಗಿ ಪಂಚಾಯತಿ ಹಾಗೂ ಇನ್ನಿತರ ಹಲವು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿ ಕಾಮಗಾರಿಯ ಹೆಸರು ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಕಾಮಗಾರಿ ಹಾಗೂ ಎಲ್ಲಿ,ಯಾವುದಕ್ಕೆ ಬಳಸಲಾಗಿದೆ ಎಂಬುವದನ್ನು ದಾಖಲಿಸದೆ ಅಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹಣದ ವೋಚರ್ ನಂಬರ್,ದಿನಾಂಕ,ಏಜೆನ್ಸಿಗೆ ಹಣ ದುಡ್ಡು ಸಂದಾಯವಾಗಿದ್ದು ಮಾತ್ರ ನಮೂದಿಸುತ್ತಾರೆ. ಆದರೆ ವಿವರಣೆಯಲ್ಲಿ ಯಾವುದಕ್ಕೆ ಖರ್ಚು,ವೆಚ್ಚ ಮಾಡಲಾಗಿದೆ ಎಂಬುವರಲ್ಲಿ ಪ್ರಶ್ನಾರ್ಥಕ ಚಿನ್ಹೆ ಮತ್ತು ಬಿಲ್ ಹಾಕಿ ಸರಕಾರದ ದುಡ್ಡು ಕೊಳ್ಳೆ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ತಾಲೂಕು ಪಂಚಾಯತ ಅಧಿಕಾರಿಗಳಿಗೆ ಇದರ ಬಗ್ಗೆ ಪ್ರಶ್ನಿಸಿದರೆ,ದಾಖಲಾತಿ ನೀಡಿದರೆ ಮಾತ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ.
ರಾಜ್ಯದ ನಾಗರಿಕರಿಗೆ ಗ್ರಾಮ ಪಂಚಾಯತ್‌ನಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳ ಬಗ್ಗೆ ಪಾರದರ್ಶಕತೆಯನ್ನು ಒದಗಿಸುತ್ತದೆ,ಹಾಗೆಯೇ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ನಿಮ್ಮ ಗ್ರಾಮ ಪಂಚಾಯತ್‌ಗೆ ಎಷ್ಟು ಹಣವನ್ನು ಕಳುಹಿಸಿದೆ ಮತ್ತು ಅದನ್ನು ಎಲ್ಲಿ ಮತ್ತು ಹೇಗೆ ಬಳಸಲಾಗುತ್ತಿದೆ, ಪರಿಣಾಮವಾಗಿ, ಸರ್ಕಾರವು ಹಣವನ್ನು ಕಳುಹಿಸಿದೆ, ಆದರೆ ಗ್ರಾಮದ ಮುಖ್ಯಸ್ಥರು ಕೆಲಸ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಾಗರಿಕರಿಗೆ ತಿಳಿಯುತ್ತದೆ. ಆದರೆ ಗ್ರಾ.ಪಂ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಸರಕಾರದ ಹಣ ಅಧಿಕಾರಿಗಳ ಜೇಬಿಗೆ ಸೇರುತ್ತಿದೆ.
ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ದಾಖಲು ಮಾಡದ ಕಾಮಗಾರಿ ಹಾಗೂ ಖರ್ಚು ವೆಚ್ಚದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇ ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೂ ಅತಿ ದೊಡ್ಡ ಹಗರಣಗಳಲ್ಲೊಂದಾದ ಸಾರ್ವಜನಿಕರ ಕೆಲಸಕ್ಕೆ ತಮಗೆ ಬೇಕಾದವರಿಗೆ ಎನ್ ಎಮ್ ಆರ್ ತೆಗೆಯುತ್ತಿದ್ದು ಇದರಿಂದ ಅತಿ ಕಡು ಬಡವರು ಈ ಕೂಲಿ ಕೆಲಸದಿಂದ ಹೊರಗೆ ಹಾಕಿರುವ ಪರಿಣಾಮದಿಂದ ಬಡ ಜನರಿಗೆ ದಿಕ್ಕು ತೋಚದೆ ನಮ್ಮ ಕರುನಾಡ ಕಂದ ಪತ್ರಿಕೆಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅತಿ ಜರೂರಾಗಿ ಮೇಲಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡು ಉತ್ತರಿಸುತ್ತಾರೆ ಕಾದು ನೋಡೋಣ...
ವರದಿ:ಚಂದ್ರಶಾಗೌಡ ಮಾಲಿ,ಪಾಟೀಲ್ ಜೇವರ್ಗಿ
