ನಿನ್ನ ಚಂದದ ಮೌನ
ಅಂದದ ಮತಿನ ಹೃದಯ
ಸುಖದ ಬಡಿತ ಹೆಚ್ಚಿಸಿದೆ…
ಹೆಚ್ಚು ನೇರಮಾತಿಲ್ಲದಿದ್ದರನು
ನಿನ್ನ ಕಣ್ಣುಗಳಲಿ ತುಂಬಿದೆ
ಪ್ರೀತಿಯ ಮುತ್ತು ಪಿಸು
ಮಾತು ಕೇಳುತಿದೆ…
ನಿನ್ನ ಪ್ರೀತಿಯ ಸಿಹಿ ಜೇನು
ಮಾತನು ನನ್ನ ಮನಸಾರೆ
ಅರೆತು ಕೊಂಡಿರುವೆ….
ನಿನ್ನ ಮಾತಿಗಾಗಿ ನನ್ನ ಕಿವಿಗಳು ಪ್ರತಿ ಕ್ಷಣವು ಕಾಯುತ್ತಿವೆ ಮಾತಿಲ್ಲದ ಪ್ರೀತಿ
ಮನ ತುಂಬಿಕೊಂಡಿದೆ…
ಮೌನದಲ್ಲೂ ಪ್ರೀತಿ ಇದೆ
ಅರಿತು ನೋಡು ಒಮ್ಮೆ
ಮಾತು ಬೇಕಿಲ್ಲ ನಮ್ಮ ಸುಂದರ ಪ್ರೀತಿಗೆ…
-ಚಂದು ವಾಗೀಶ ದಾವಣಗೆರೆ