ಸೂರ್ಯವಂಶದ ಸೂರ್ಯ
ತ್ರೆತಾಯುಗದ ಪ್ರತ್ಯಕ್ಷ ದೈವ
ಮರಳಿ ಬಂದ ಕಲಿಯುಗದಲ್ಲಿ
ತನ್ನ ಜನ್ಮಭೂಮಿ ಅಯೋಧ್ಯ ಕಂಡು
ಬೆರಗಾಗಿ ನಿಂತ ರಾಮ
ಸೀತಾ ರಾಮರೆಧರೆಗಿಳಿದಂತೆ
ಎಲ್ಲೆಲ್ಲೂ ಶ್ರೀರಾಮ ಭಕ್ತಿಯ
ಭಜನೆ, ಪೂಜೆ ,ಸಂಗೀತ ದೀಪಹಾಗೂಪುಷ್ಪಾಲಂಕಾರ
ಕಂಗೊಳಿಸುತ್ತಿದೆ ಗೆಳೆಯರೇ
ರಾಮ ರಾಜ್ಯದ ವೈಭವ
ಕಣ್ತುಂಬಿಕೊಳ್ಳುವ ಸಮಯ,
ಭರತಖಂಡವೇ ದೀಪವು
ಬೆಳಗಿ ಪ್ರಜ್ವಲಿಸುತ್ತಿದೆ,
ಮನೆ ಮನೆಗಳಲ್ಲಿ ಬೆಳಗುವ ಭಕ್ತಿಯ ವೈಭವ ನಯನಮನೋಹರ ಕ್ಷಣ
ರಾಮ ನಾಮ ಜಪಿಸುವ
ರಘುರಾಮ.. ಶಕ್ತಿಯು ನೀ
ಯುಕ್ತಿಯುನೀ ರಾಮ….
ನಕ್ಷತ್ರ ಕಣ್ಣುಗಳ ನೋಟದಿ
ಬಾಲ ರಾಮನ ರೂಪದಿ
ಪುಣ್ಯಭೂಮಿಅಯೋಧ್ಯೆಯ
ದೇವಲೋಕದ ಸೃಷ್ಟಿಯ ಸಂಭ್ರಮಿಸಲುಜಾನಕಿವಲ್ಲಭ
ಶಬರಿಯ ದೈವ ಕೌಶಲ್ಯ ಸುತ
ಅಯೋಧ್ಯೆಗೆ ಬಂದಿಹನು
ಬಾಲರಾಮನ ಜೊತೆಗೆ
ಹನುಮನರಿವ ಅದ್ಭುತ
ಈ ಅಮೃತಗಳಿಗೆಯ ದೈವ ಸ್ವರೂಪಿ ನಮೋ ಭಕ್ತಿಗೆ ರಾಮನಾಮವೇ ಶ್ರೇಷ್ಠ ಶಕ್ತಿ
-ಚಂದು ವಾಗೀಶ ದಾವಣಗೆರೆ