ಕೊಡಗು ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗೋಣಿಕೊಪ್ಪ ಠಾಣಾಧಿಕಾರಿ ರೂಪಾದೇವಿ ಬಿರಾದಾರ್ ಅವರನ್ನು ಗೌರವಿಸಲಾಯಿತು.
ಅರುವತೊಕ್ಕು ಗ್ರಾ.ಪಂ ಎದುರು ನಡೆದ ಪಿಕಪ್ ಮತ್ತು ಸ್ಕೂಟರ್ ಅಪಘಾತದಲ್ಲಿ ಗೋಣಿಕೊಪ್ಪ ಗ್ರಾಪಂ ಮಾಜಿ ಸದಸ್ಯೆ ಮತ್ತು ಸಂತ ಥೋಮಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಾವಿಗೀಡಾಗಲು ಕಾರಣನಾದ ನೇಪಾಳ ಮೂಲದ ಪಿಕಪ್ ಚಾಲಕ ಕಮಲ್ ಸಿಂಗ್ ಎಂಬಾತನನ್ನು ಶ್ರೀಮಂಗಲದಲ್ಲಿ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಬಂಧಿಸಲು ಕಾರಣರಾಗಿರುವುದನ್ನು ಶ್ಲಾಘಿಸಿ ಗೋಣಿಕೊಪ್ಪ ಠಾಣಾಧಿಕಾರಿ ಕಛೇರಿಯಲ್ಲಿ ಅಭಿನಂದಿಸಲಾಯಿತು.
“ಗೋಣಿಕೊಪ್ಪಕ್ಕೆ ರೂಪಾದೇವಿ ಅವರು ಠಾಣಾಧಿಕಾರಿಯಾಗಿ ಬಂದ ನಂತರ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಬಹುತೇಕವಾಗಿ ನಿಯಂತ್ರಿಸಲಾಗಿದೆ.
ಕೊಡಗು ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಸಮಿತಿ ವತಿಯಿಂದ ಗೋಣಿಕೊಪ್ಪ ಠಾಣಾಧಿಕಾರಿ ರೂಪಾದೇವಿ ಬಿರಾದಾರ್ ಅವರನ್ನು ಅಭಿನಂದಿಸಲಾಯಿತು.
ಜತೆಗೆ ಹಲವಾರು ಪ್ರಕರಣಗಳನ್ನು ಶೀಘ್ರದಲ್ಲಿ ಭೇದಿಸಿ ನೊಂದವರಿಗೆ ನ್ಯಾಯ ಕೊಡಲು ಶ್ರಮಿಸುತ್ತಿದ್ದಾರೆ. ಹೆಣ್ಣು ಮಗಳ ಈ ಬಿಡುವಿಲ್ಲದ ಸಮಯದ ಮತ್ತು ಒತ್ತಡದ ಕರ್ತವ್ಯ ನಿಷ್ಠೆ ಪ್ರತಿಯೊಬ್ಬ ಹೆಣ್ಣುಮಗಳಿಗೂ
ಮಾದರಿಯಾಗಬೇಕು,”ಎಂದು ಸಮಿತಿ ಅಧ್ಯಕ್ಷ ಅಜ್ಜಾಮಾಡ ಕಟ್ಟಿಮಂದಯ್ಯ ಹೇಳಿದರು.
ಸತೀಶ್ ದೇವಯ್ಯ,ಕಾಶಿಕಾರ್ಯಪ್ಪ ಸಿ ಎನ್ ವಿಶ್ವನಾಥ್,ಮಾದಯ್ಯ ಸುಬ್ರಮಣಿ ಇತರರು ಇದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್