ಕೊಟ್ಟೂರು:ಹರಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ಮೇಲಿದ್ದ ಚಾರ್ಜ್ ಶೀಟ್ ಪ್ರಕರಣ ಮುಕ್ತಾಯ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲಂಚದ ಹಣ 20,000/-ಸ್ವೀಕರಿಸುವಾಗ ಹೊಸಪೇಟೆ ಲೋಕಾಯುಕ್ತರ ಬಲೆಗೆ ಬಿದ್ದ ಕೆ,ಕೆ,ಅರ್,ಟಿ,ಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಚಾಲಕ ಹೊಸಪೇಟೆ ಲೋಕಾಯುಕ್ತ ಪೋಲಿಸ್ ಠಾಣೆಯಲ್ಲಿ ದಿನಾಂಕ 26-06-2024 ರಂದು ಕೆ .ಕೆ .ಅರ್. ಟಿ .ಸಿ ಹರಪ್ಪನಹಳ್ಳಿ ಘಟಕದ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಶ್ರೀ ಮಹಾಬಲೇಶ್ವರ ಭಾಗ್ವತ್ ರವರು ಠಾಣೆಗೆ ಬಂದು ದೂರು ನೀಡಿದ್ದು ತಮ್ಮ ಮೇಲೆ 2021 ರಲ್ಲಿ ದಾಖಲಾದ ಚಾರ್ಜ ಶೀಟ್ ಪ್ರಕರಣದ ಮಕ್ತಾಯಕ್ಕಾಗಿ ಕೆ.ಕೆ.ಅರ್ .ಟಿ.ಸಿ. ವಿಭಾಗೀಯ ನಿಯಂತ್ರಣಧಿಕಾರಿಯವರಾದ ಜಗದೀಶ್ ವಿ.ಎಸ್.ರವರು ಜೂನ್ ತಿಂಗಳಲ್ಲಿ ವಿಚಾರಣೆ ನಡೆಸಿ ಅವರ ಮೇಲಿನ ದೋಷಾರೋಪಣೆಯನ್ನು ಕಡಿಮೆ ಮಾಡಿ ಮುಕ್ತಾಯ ಮಾಡಲು 25000/-ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಲಂಚದ ಹಣವನ್ನು ತಮ್ಮ ಜೀಪ್ ಚಾಲಕ ಮಲ್ಲಿ ಕಾರ್ಜನ ರವರ ಬಳಿ ಕೊಡುವಂತೆ ಸೂಚಿಸಿದ್ದು
ಈ ಸಂಬಂಧ ಮಹಾಬಲೇಶ್ವರ ರವರು ರೂ 5000/ ರೂ.ಗಳನ್ನು ನೀಡಿದ್ದು ಬಾಕಿ ಲಂಚದ ಹಣವನ್ನು ಕೊಡಲು ಇಷ್ಟವಿಲ್ಲದೆ ದಿನಾಂಕ 26-06-2024 ರಂದು ದೂರು ನೀಡಿದ್ದು ಸದರಿ ದೂರಿನ ಮೇರೆಗೆ ಹೊಸಪೇಟೆ ಲೋಕಾಯುಕ್ತಾ ಠಾಣಾ ಗುನ್ನೆ ನಂ : 04/2024 ರಿತ್ಯಾ ಪ್ರಕರಣ ದಾಖಲಿಸಿ ಸಂಜೆ 5- 30 ಗಂಟೆಗೆ ಪೋಲೀಸ್ ಉಪಾಧೀಕ್ಷಕರಾದ ಶ್ರೀ ಶೀಲವಂತ ಹೊಸಮನಿ ಪೋಲಿಸ್
ನೀರಿಕ್ಷಕರಾದ ಶ್ರೀ ರಾಜೇಶ್ ಎಸ್ ಲಮಾಣಿ. ಶ್ರೀ ಸುರೇಶ್ ಬಾಬು ಅರ್ ಬಿ. ಸಿಬ್ಬಂದಿಯವರಾದ ಸುಭಾಷ. ಸುರೇಶ್.ಶ್ರೀನಿವಾಸ.ರೇಣುಕಪ್ಪ. ಕುಮಾರ್ ನಾಯ್ಕ್ .ಚನ್ನಬಸಪ್ಪ.ಮಾರುತಿ. ಮತ್ತು ಕೃಷ್ಣರವರು ದಾಳಿ ಮಾಡಿ ಲಂಚದ ಹಣ ರೂ 20.000/ಗಳನ್ನು ವಿಭಾಗಿಯಾ ನಿಯಂತ್ರಣಾಧಿಕಾರಿಯವರ ಜೀಪ್ ಚಾಲಕ ಮಲ್ಲಿಕಾರ್ಜುನ ರವರು ಸ್ವೀಕರಿಸಿ ಸಿಕ್ಕಿಬಿದ್ದಿದ್ದು ಸದರಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಭಾಗಿಯ ನಿಯಂತ್ರಧಿಕಾರಿ ಜಗದೀಶ್ ವಿ.ಎಸ್.ರವರನ್ನು ದಸ್ತಗಿರಿ ಮಾಡಿ ಮಂದಿನ ಕ್ರಮ ಕೈಗೊಂಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.